
ರಾಜ್ಯದ ಜನರೇ ಎಚ್ಚರ… ಎಚ್ಚರ.. ಕೇಸ್ ಕಡಿಮೆ ಆಗಿದೆ ಅಂತಾ ಯಾಮಾರಿದ್ರೆ ಗಂಡಾಂತರ ಫಿಕ್ಸ್.
ಹೌದು, ಬೆಂಗಳೂರಿನಲ್ಲಿ ಮತ್ತೆ ಏರಿಕೆಯಾಗುತ್ತಾ ಕೊರೋನಾ ಕೇಸ್..? ಆರೋಗ್ಯ ಇಲಾಖೆ ಗಂಡಾಂತರದ ಮುನ್ಸೂಚನೆ ನೀಡಿದೆ. ಐಸಿಯುಗೆ ದಾಖಲಾಗ್ತಿರೋ ಸೋಂಕಿತರ ಪ್ರಮಾಣ ನೋಡಿ ಆರೋಗ್ಯ ಇಲಾಖೆಗೇ ಶಾಕ್ ಆಗಿದೆ. ಕೊರೋನಾ ಸೆಕೆಂಡ್ ವೇವ್ ಎದುರಿಸೋಕೆ ಆರೋಗ್ಯ ಇಲಾಖೆ ರೆಡಿಯಾಗ್ತಿದೆ. ಆಸ್ಪತ್ರೆಗಳಲ್ಲಿ ಆರೋಗ್ಯ ಇಲಾಖೆ ಐಸಿಯು ಹೆಚ್ಚಿಸಿಕೊಳ್ತಿದೆ. ಬೆಂಗಳೂರಲ್ಲಿ ಕಂಟೈನರ್ ಐಸಿಯು ಆಸ್ಪತ್ರೆ ಶುರುವಾಗ್ತಿದ್ದು, ಕೆಸಿ ಜನರಲ್ ಆಸ್ಪತ್ರೆಯಲ್ಲಿ 100 ಬೆಡ್ ಐಸಿಯು ರೆಡಿಯಾಗ್ತಿದೆ. ಮುಂದಿನ ವಾರ ಸಿಎಂ ಬಿಎಸ್ವೈ ಹೊಸ ಕಂಟೈನರ್ ಆಸ್ಪತ್ರೆಯನ್ನ ಉದ್ಘಾಟಿಸಲಿದ್ದಾರೆ.
ಹಾಗಾದ್ರೆ ಯಾವ ಯಾವ ಆಸ್ಒತ್ರೆಯಲ್ಲಿ ICU ಬೆಡ್ ಎಷ್ಟೆಷ್ಟಾಗ್ತಿದೆ ಅಂತ ನೋಡೋದಾದ್ರೆ…
ಕೆಸಿ ಜನರಲ್ ಆಸ್ಪತ್ರೆ – 100 ಐಸಿಯು ಬೆಡ್
ವಿಕ್ಟೋರಿಯಾ ಆಸ್ಪತ್ತೆ – 32 ಐಸಿಯು ಬೆಡ್
ಸಿವಿ ರಾಮನ್ ಆಸ್ಪತ್ರೆ – 30 ಐಸಿಯು ಬೆಡ್
ಐಸೋಲೇಷನ್ ಆಸ್ಪತ್ರೆ – 30 ಐಸಿಯು ಬೆಡ್
ಆನೇಕಲ್ ತಾಲೂಕು ಆಸ್ಪತ್ರೆ – 7 ಐಸಿಯು ಬೆಡ್
ಕೆ.ಆರ್ ಪುರ ತಾಲೂಕು ಆಸ್ಪತ್ರೆ – 7 ಐಸಿಯು ಬೆಡ್
ಯಲಹಂಕ ತಾಲೂಕು ಆಸ್ಪತ್ರೆ – 7 ಐಸಿಯು ಬೆಡ್
ಬೆಂಗಳೂರಿನಲ್ಲೇ ಒಟ್ಟು 223 ಐಸಿಯು ಬೆಡ್ ಹೆಚ್ಚಳ
Comments are closed.