ಕುಂದಾಪುರ: ಕುಂದಾಪುರ ಪುರಸಭೆಯ 9ನೇ ಅವಧಿಗೆ ನೂತನ ಅಧ್ಯಕ್ಷರಾಗಿ ವೀಣಾ ಭಾಸ್ಕರ್, ಉಪಾಧ್ಯಕ್ಷರಾಗಿ ಸಂದೀಪ್ ಖಾರ್ವಿ ಅವರು ಮಂಗಳವಾರದಂದು ನಡೆದ ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾದರು. ವೀಣಾ ಅವರು ಟಿ.ಟಿ.ರೋಡ್ ವಾರ್ಡ್‌ನ ಸದಸ್ಯೆಯಾಗಿದ್ದು ಸಂದೀಪ್ ಖಾರ್ವಿ ಅವರು ಬಹದ್ದೂರ್ ಶಾ ವಾರ್ಡ್‌ನ ಸದಸ್ಯರಾಗಿದ್ದಾರೆ.

ಕಳೆದ ಎರಡು ವರ್ಷಗಳ ಹಿಂದೆ ನಡೆದ ಪುರಸಭೆಯ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸಿತ್ತು. ಒಟ್ಟು 23 ಸದಸ್ಯರಲ್ಲಿ ಬಿಜೆಪಿ 14, 8 ಕಾಂಗ್ರೆಸ್, 1 ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದರು. ಆದರೆ ಈ ಹಿಂದೆ ಮೂರು ಬಾರಿ ಚುನಾವಣೆಗೆ ದಿನ ನಿಗದಿಯಾದರೂ ನ್ಯಾಯಾಲಯಕ್ಕೆ ಆಕ್ಷೇಪ ಸಲ್ಲಿಕೆಯಾದ ಕಾರಣ ಎರಡು ವರ್ಷಗಳಿಂದ ಆಯ್ಕೆಯಾದ ಸದಸ್ಯರಿಗೆ ಅಧಿಕಾರ ಇಲ್ಲದೇ ಅತಂತ್ರ ಸ್ಥಿತಿ ಇತ್ತು. ಇತ್ತೀಚೆಗೆ ನೂತನ ಮೀಸಲಾತಿ ಪ್ರಕಟವಾಗಿದ್ದು ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ‘ಎ’ ಪ್ರವರ್ಗಕ್ಕೆ ಮೀಸಲಾಗಿತ್ತು.
ಇಂದು ನಡೆದ ಚುನಾವಣೆ ಪ್ರಕ್ರಿಯೆಗೆ ಇವರಿಬ್ಬರೇ ನಾಮಪತ್ರ ಸಲ್ಲಿಸಿದ್ದರು. ಚುನಾವಣಾಧಿಕಾರಿಯಾಗಿದ್ದ ತಹಶೀಲ್ದಾರ್ ಆನಂದಪ್ಪ ನಾಯ್ಕ ಅವರು ಚುನಾವಣಾ ಫಲಿತಾಂಶವನ್ನು ಘೋಷಿಸಿದರು.
ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ, ಪುರಸಭೆಯ ಮಾಜಿ ಅಧ್ಯಕ್ಷ ಕೆ.ಮೋಹನ್‌ದಾಸ್ ಶೆಣೈ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಶ್ರೀಲತಾ ಸುರೇಶ್ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ರೂಪಾ ಪೈ, ಲಕ್ಷ್ಮೀ ಮಂಜು ಬಿಲ್ಲವ, ಮಾಜಿ ಪುರಸಭಾ ಅಧ್ಯಕ್ಷೆ ದೇವಕಿ ಪಿ ಸಣ್ಣಯ್ಯ, ಪುರಸಭೆಯ ಸದಸ್ಯರಾದ ಚಂದ್ರಶೇಖರ ಖಾರ್ವಿ, ಅಬ್ಬು ಮಹಮ್ಮದ್, ಗಿರೀಶ್ ಜಿ.ಕೆ ಸೇರಿದಂತೆ ಸರ್ವ ಸದಸ್ಯರು ಅಭಿನಂದಿಸಿದರು.
ಬಿಜೆಪಿ ಪಕ್ಷದ ಪ್ರಮುಖರಾದ ಸುರೇಶ್ ಶೆಟ್ಟಿ ಕಾಡೂರು, ಸದಾನಂದ ಉಪ್ಪಿನಕುದ್ರು, ಗುಣರತ್ನಾ, ದಿವಾಕರ ಪೂಜಾರಿ ಕಡ್ಗಿಮನೆ, ಸುಧೀರ್‌ಕುಮಾರ ಶೆಟ್ಟಿ ಮಾರ್ಕೋಡು, ಸುರೇಶ್ ಶೆಟ್ಟಿ ಗೋಪಾಡಿ, ಸತೀಶ್ ಪೂಜಾರಿ ವಕ್ವಾಡಿ, ರಾಜೇಶ್ ಕಡ್ಗಿಮನೆ, ಸುನೀಲ್ ಶೆಟ್ಟಿ ಹೇರಿಕದ್ರು, ಸುರೇಂದ್ರ ಕಾಂಚನ್, ಅವಿನಾಶ್ ಉಳ್ತೂರು, ಜೀವನ್ ಕೋಟೇಶ್ವರ, ಸಂಪತ್‌ಕುಮಾರ ಶೆಟ್ಟಿ ಕೆದೂರು ಇದ್ದರು.
(ವರದಿ- ಯೋಗೀಶ್ ಕುಂಭಾಸಿ)
Comments are closed.