
ಬೆಂಗಳೂರು: ಪತಿಯೊಬ್ಬ ಹೆಂಡತಿಗೆ ಅಶ್ಲೀಲ ವಿಡಿಯೋ ನೋಡುವಂತೆ ಪೀಡಿಸಿದ ಘಟನೆಯೊಂದು ಇಲ್ಲಿಂದ ವರದಿಯಾಗಿದೆ.
ಲತೀರ್ ರೆಹಮಾನ್ ಅಶ್ಲೀಲ ವಿಡಿಯೋ ನೋಡುವಂತೆ ಹೆಂಡತಿಯನ್ನು ಪೀಡಿಸುತ್ತಿದ್ದ. ಪತಿ ಕಿರುಕುಳ ತಾಳಲಾರದೆ ಸಂತ್ರಸ್ತೆ ಬಸವನಗುಡಿಯ ಮಹಿಳಾ ಠಾಣೆಗೆ ದೂರು ನೀಡಿದ್ದಾಳೆ. ಈ ಕಾರಣಕ್ಕೆ ಲತೀರ್ ವಿರುದ್ದ ಎಫ್ಐಆರ್ ದಾಖಲಾಗಿದೆ.
ಸಂತ್ರಸ್ತೆ ವೃತ್ತಿಯಲ್ಲಿ ವೈದ್ಯೆ ಆಗಿದ್ದಾರೆ. 2019ರ ಜೂನ್ನಲ್ಲಿ ಖಾಸಗಿ ಕಂಪನಿ ಉದ್ಯೋಗಿ ಲತೀರ್ ರೆಹಮಾನ್ ಜೊತೆ ಈಕೆ ವಿವಾಹ ಆಗಿದ್ದಳು. ವಿವಾಹ ಬಳಿಕ ವರದಕ್ಷಿಣೆಗಾಗಿ ಲತೀರ್ ರೆಹಮಾನ್ ಕಿರುಕುಳ ನೀಡುತ್ತಿದ್ದ. ವರದಕ್ಷಿಣೆಗಾಗಿ ಮನೆಯವರು ಸಂತ್ರಸ್ತೆಯ ಚಿನ್ನಾಭರಣ ಕಸಿದು ಹೊರದಬ್ಬಿದ ಆರೋಪ ಕೂಡ ಇದೆ. ಇದರ ಜೊತೆ ನಿತ್ಯವೂ ಈತ ಹೆಂಡತಿ ಬಳಿ ಬಂದು ಅಶ್ಲೀಲ ವಿಡಿಯೋ ನೋಡುವಂತೆ ಕೇಳುತ್ತಿದ್ದ. ಆಕೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರೂ ಆತ ಅದನ್ನು ನಿಲ್ಲಿಸುತ್ತಿರಲಿಲ್ಲ.
ಕೊನೆಗೆ ಆಕೆ ಬೇರೆ ದಾರಿ ಕಾಣದೆ ಆರೋಪಿ ವಿರುದ್ಧ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಳು.
Comments are closed.