ಅನಿವಾಸಿ ಭಾರತೀಯರು

ಅಕ್ಟೋಬರ್.23: ಫೇಸ್‌ಬುಕ್ ಲೈವ್‌ನಲ್ಲಿ ಹರೀಶ್ ಶೇರಿಗಾರ್‌ರಿಂದ ಎಸ್‌ಪಿಬಿಯವರಿಗೆ “ಗೌರವ ಗಾನ ನಮನ”

Pinterest LinkedIn Tumblr

ದುಬೈಯ ಖ್ಯಾತ ಉದ್ಯಮಿ, ಕನ್ನಡ, ತುಳು ಚಿತ್ರ ನಿರ್ಮಾಪಕ, ಗಲ್ಫ್ ರಾಷ್ಟ್ರಗಳಲ್ಲಿ ಜ್ಯೂನಿಯರ್ ಎಸ್.ಪಿ.ಬಿ ಎಂದೇ ಖ್ಯಾತರಾಗಿರುವ ಪ್ರಸಿದ್ಧ ಗಾಯಕ ಶ್ರೀ ಹರೀಶ್ ಶೇರಿಗಾರ್ ಅವರು ಫೇಸ್ ಬುಕ್ ಲೈವ್ ನಲ್ಲಿ ಎಸ್.ಪಿ,ಬಿ ಅವರ ಹಾಡುಗಳನ್ನು ಹಾಡುವ ಮೂಲಕ ಇತ್ತೀಚೆಗೆ (ಸೆಪ್ಟಂಬರ್.25) ಇಹಲೋಕ ತ್ಯಜಿಸಿದ ಬಹು ಭಾಷಾ ನಟ, ಸಂಗೀತ ಲೋಕದ ದಿಗ್ಗಜ, ಸ್ವರ ಸಾಮ್ರಾಟ, ಮಹಾನ್ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಗೌರವ ಶೃದ್ಧಾಂಜಲಿ ಅರ್ಪಿಸಲಿದ್ದಾರೆ.

ಈ ನುಡಿನಮನ ಕಾರ್ಯಕ್ರಮ 23.10.2020ರಂದು ದುಬೈಯಲ್ಲಿ ನಡೆಯಲಿದ್ದು, ಫೇಸ್ ಬುಕ್ ಲೈವ್ ನಲ್ಲಿ ಸಂಜೆ 7.00 ಕ್ಕೆ (UAE) ರಾತ್ರಿ 8: 30 ಕ್ಕೆ (IST) ವೀಕ್ಷಿಸ ಬಹುದಾಗಿದೆ.

ಬಹುದಿನಗಳ ನಂತರ ಮತ್ತೆ ಫೇಸ್ ಬುಕ್ ಲೈವ್ ಮೂಲಕ ಗಾಯನ ಆರಂಭಿಸಲಿರುವ ಶ್ರೀ ಹರೀಶ್ ಶೇರಿಗಾರ್ ಅವರಿಗೆ ಖ್ಯಾತ ಗಾಯಕಿ ಅಕ್ಷತಾ ರಾವ್ (UAE) ಸಾಥ್ ನೀಡಲಿದ್ದಾರೆ. ಎರಲ್ ಜೋಯ್ ಅವರ ನಿರೂಪಣೆಯಲ್ಲಿ ಕಾರ್ಯಕ್ರಮ ಮೂಡಿ ಬರಲಿದೆ.

ವಿಶೇಷ ಅಥಿತಿಗಳಾಗಿ ಚಿತ್ರರಂಗದ ಮೇರು ನಟ ಅನಂತ್ ನಾಗ್ ಹಾಗೂ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಶ್ರೀ ರಾಜೇಂದರ್ ಬಾಬು ಸಿಂಗ್ ಅವರು ಪಾಲ್ಗೊಂಡು ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ನುಡಿನಮನ ಸಲ್ಲಿಸಲಿದ್ದಾರೆ.

ಕೋಟ್ಯಂತರ ಸಂಗೀತ ಪ್ರೇಮಿಗಳನ್ನು ದು:ಖ ಸಾಗರದಲ್ಲಿ ಮುಳುಗಿಸಿ ಬಾರದ ಲೋಕಕ್ಕೆ ತೆರಳಿದ ಸ್ವರ ಮಾಂತ್ರಿಕ, ಗಾನ ಗಾರುಡಿ ಎಸ್. ಪಿ ಬಾಲಸುಬ್ರಹ್ಮಣ್ಯಂ ಅವರ ಈ ಗೌರವ ನುಡಿನಮನ ಕಾರ್ಯಕ್ರಮದಲ್ಲಿ ತಾವೆಲ್ಲರೂ ಭಾಗಿಯಾಗಿ, ಫೇಸ್ ಬುಕ್ ಲೈವ್ ನಲ್ಲಿ ಮೂಡಿ ಬರಲಿರುವ ಈ ಒಂದು ಸ್ಮರಣೀಯ ಕಾರ್ಯಕ್ರಮವನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಂಡು ಈ ಕೆಳಗಿನ ಪುಟಗಳನ್ನು ಲೈಕ್ ಮಾಡುವ ಮೂಲಕ ಗಾಯನ ಲೋಕದ ಮೇರು ಪ್ರತಿಭೆ ಎಸ್. ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಗೌರವ ನಮನ ಸಲ್ಲಿಸಬೇಕೆಂದು ಈ ಮೂಲಕ ವಿನಂತಿ ಮಾಡುತ್ತಿದ್ದೇವೆ.

https://www.facebook.com/harishsherigar66  

https://www.facebook.com/KannadigaWorld

Comments are closed.