ಕುಂದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿಸಿ ಟ್ರಸ್ಟ್, ಪ್ರಗತಿಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಕುಂದಾಪುರ ತಾಲೂಕು ಇವರ ಸಹಯೋಗದೊಂದಿಗೆ ಸ್ವ-ಉದ್ಯೋಗಕ್ಕೆ ಪೂರಕವಾಗಿ ಸಂಘದ 75 ಸದಸ್ಯರುಗಳಿಗೆ ದ್ವಿ-ಚಕ್ರ ವಾಹನ ಮತ್ತು ಹಸಿರು ಇಂಧನ ಸಾಧನಗಳ ವಿತರಣೆಯ ಕಾರ್ಯಕ್ರಮ ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀ ಕ್ಷೇ.ಧ.ಗ್ರಾ.ಯೋಜನೆ ಕೇಂದ್ರ ಕಚೇರಿ ಮುಖ್ಯ ನಿರ್ವಹಣಾಕಾರಿ ಅನಿಲ್ ಕುಮಾರ್ ಎಸ್.ಎಸ್, 21 ಸಾವಿರ ಕಾರ್ಯಕರ್ತರ ಬೃಹತ್ ಪಡೆ ರಾಜ್ಯದಂತ ಹಳ್ಳಿಯ ಮೂಲೆ ಮೂಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. 42ಲಕ್ಷ ಮಂದಿಗೆ ಗ್ರಾಮಾಭಿವೃದ್ಧಿ ಯೋಜನೆ ಇಂದು ಬೆಳಕಾಗಿದೆ. ಯೋಜನೆಯ ಯೋಜನೆಗಳು ಪರಿಣಾಮಕಾರಿಯಾಗಿ ವೈಜ್ಞಾನಿಕವಾಗಿ ಆನ್ವೇಷಣೆಗೊಂಡು ಅನುಷ್ಟಾನಗೊಳಿಸಲಾಗುತ್ತದೆ. ಇತಂಹ ಯೋಜನೆಗಳಿಂದ ಸದಸ್ಯರು, ಕುಟುಂಬಗಳು, ಗ್ರಾಮಗಳು, ಸೇರಿದಂತೆ ದೇಶಕ್ಕೆ ಒಳಿತಾಗುವ ಯೋಜನೆ ಖಾವಂದರ ಕನಸಾಗಿದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇಂದು ರಾಜ್ಯದಂತ ಪ್ರತಿ ಹಳ್ಳಿಯನ್ನು ತಲುಪಿದೆ. ಪೂಜ್ಯ ಡಾ.ವಿರೇಂದ್ರ ಹೆಗ್ಗಡೆಯವರು ಇಂತಹ ಗ್ರಾಮಾಭಿವೃದ್ಧಿ ಸೇವೆಯನ್ನು ಎಲ್ಲಾ ಕಡೆ ಪಸರಿಸಿ ಗ್ರಾಮಗಳ ಅಭಿವೃದ್ಧಿಯ ಜತೆಗೆ ಪರಿರ್ವತನೆ ಕಾಣುವಂತೆ ಮಾಡಿದ ಇವರ ಪರಿಕಲ್ಪನೆಯ ಯೋಜನೆಗಳನ್ನು ಸರ್ಕಾರಗಳು ಮಾದರಿಯಾಗಿ ಪರಿಗಣಿಸಿದೆ ಎಂದರು.
ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಹಿರಿಯ ಧರ್ಮದರ್ಶಿ ಕೆ.ಸೂರ್ಯನಾರಾಯಣ ಉಪಾಧ್ಯಾಯ ಮತ್ತು ಆಡಳಿತ ಧರ್ಮದರ್ಶಿ ಕೆ.ಶ್ರೀರಮಣ ಉಪಾಧ್ಯಾಯ ಇವರು ಸಂಘದ 75 ಮಂದಿ ಸದಸ್ಯರಿಗೆ ದ್ವಿಚಕ್ರ ವಾಹನದ ಕೀ ಹಸ್ತಾಂತರಿಸಿದರು.
ಉಡುಪಿ ಕರಾವಳಿ ಪ್ರಾದೇಶಿಕ ಕಚೇರಿ ಪ್ರಾದೇಶಿಕ ನಿರ್ದೇಶಕ ವಸಂತ್ ಸಾಲಿಯಾನ್ ಹಸಿರು ಇಂಧನ ಸಾಧನಗಳನ್ನು ಹಾಗೂ ವಿವಿಧ ಯೋಜನೆಯ ಸವಲತ್ತುಗಳನ್ನು ವಿತರಿಸಿದರು.
ತೆಕ್ಕಟ್ಟೆ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಜಯಂತಿ ಕಾಂಚನ್ ಅಧ್ಯಕ್ಷತೆ ವಹಿಸಿದ್ದರು. ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಳದ ಆಡಳಿತ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗೋಪಾಲ ಕೃಷ್ಣ ಶೆಟ್ಟಿ, ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಕೇಂದ್ರ ಸಮಿತಿ ಅಧ್ಯಕ್ಷೆ ಶೋಭಾ ಚಂದ್ರ, ವಾಸ್ತು ತಜ್ಞ ಬಸವರಾಜ್ ಶೆಟ್ಟಿಗಾರ್, ಜನಜಾಗೃತಿ ವೇದಿಕೆ ಅಧ್ಯಕ್ಷ ನವೀನ್ ಚಂದ್ರ, ಸೆಲ್ಕೋ ಸಂಸ್ಥೆಯ ಮ್ಯಾನೇಜರ್ ಶೇಖರ ಶೆಟ್ಟಿ, ತೆಕ್ಕಟ್ಟೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶೇಖರ ಕಾಂಚನ್ ಕೊಮೆ ಮೊದಲಾದವರೂ ಉಪಸ್ಥಿತರಿದ್ದರು.
ಜರ್ನಾದನ್ ಕುಂಭಾಸಿ ಪ್ರಾರ್ಥಿಸಿದರು. ಧ.ಗ್ರಾ.ಯೋಜನೆ ಬಿಸಿ ಟ್ರಸ್ಟ್‌ನ ಉಡುಪಿ ಜಿಲ್ಲಾ ಹಿರಿಯ ನಿರ್ದೇಶಕ ಗಣೇಶ್ ಬಿ ಪ್ರಸ್ತಾವನೆಗೈದು, ಸ್ವಾಗತಿಸಿದರು. ಕೃಷಿ ಅಧಿಕಾರಿ ಚೇತನ್ ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಯೋಜನಾಕಾರಿ ಮುರಳೀಧರ್ ವಂದಿಸಿದರು.
Comments are closed.