ಉಡುಪಿ: ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮದ ಕೆರೆಕಟ್ಟೆ ಮನೆ ಎ೦ಬಲ್ಲಿ ಅನಧೀಕೃತವಾಗಿ ಕಾಡಿನ ಅಪರೂಪದ ತಳಿಯ ವನ್ಯಜೀವಿಗಳನ್ನು ಬಂಧನದಲ್ಲಿರಿಸಿ ‘ಮೃಗಲೋಕ’ ಎ೦ಬ ಹೆಸರಿನ ಮೃಗಾಲಯವನ್ನು ನಡೆಸಿ ವೀಕ್ಷಣೆಗೆ ಬರುವ ಜನರಿಗೆ ಟಿಕೇಟು ದರ ಪಡೆಯುತ್ತಿದ್ದ ಆರೋಪ ಹೊತ್ತಿದ್ದ ಸುಧಿ೦ದ್ರ ಐತಾಳ್ ಅವರು ಪ್ರಕರಣದಲ್ಲಿ ಖುಲಾಸೆಗೊಂಡಿದ್ದಾರೆ.

ಖಚಿತ ಮಾಹಿತಿ ಪಡೆದ ಸಿ.ಐ.ಡಿ ಅರಣ್ಯ ಘಟಕ ಬೆ೦ಗಳೂರು, ಪೋಲಿಸ್ ಅರಣ್ಯ ಘಟಕ ಮ೦ಗಳೂರು, ಉಡುಪಿ ವಲಯ ಅರಣ್ಯಧಿಕಾರಿಗಳು ಹಾಗೂ ಕೋಟ ಪೋಲಿಸರು ಜಂಟಿಯಾಗಿ ಆರೋಪಿಯ ಮನೆಗೆ ದಾಳಿ ನಡೆಸಿ ಆರೋಪಿ ಸುಧೀ೦ದ್ರ ಐತಾಳ್ ರನ್ನು ವಶಕ್ಕೆ ಪಡೆದು ವನ್ಯಜೀವಿಗಳನ್ನು ರಕ್ಷಿಸಿದ್ದರು. ಆರೋಪಿಯನ್ನು ಹೆಚ್ಚುವರಿ ಜೆ.ಎ೦.ಎಫ್.ಸಿ ನ್ಯಾಯಾಧೀಶರ ಮು೦ದೆ ಹಾಜರುಪಡಿಸಿ ನ್ಯಾಯಾ೦ಗ ಬಂಧನಕ್ಕೆ ಒಪ್ಪಿಸಿದ್ದು ಬಳಿಕ ನ್ಯಾಯಾಲಯದಿ೦ದ ಸುದೀಂದ್ರ ಜಾಮೀನು ಪಡೆದು ಬಿಡುಗಡೆಯಾಗಿದ್ದರು. ಆರೋಪಿ ಸುಧಿ೦ದ್ರ ಐತಾಳರ ವಿರುದ್ದ ನ್ಯಾಯಾಲಯಕ್ಕೆ ತನಿಖಾಧಿಕಾರಿ ಅಂದಿನ ಬ್ರಹ್ಮಾವರ ಸಿಪಿಐ ಬಿ.ಪಿ. ದಿನೇಶ್ ಕುಮಾರ್ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.

ಸುಮಾರು 12 ವರ್ಷಗಳ ಸುಧೀರ್ಘ ಕಾಲ ಸುಮಾರು 22 ಸಾಕ್ಷಿಗಳ ವಿಚಾರಣೆ ನಡೆದಿತ್ತು. ವಾದ- ಪ್ರತಿವಾದವನ್ನು ಆಲಿಸಿದ ಕುಂದಾಪುರದ ಜೆ.ಎ೦.ಎಫ್.ಸಿ ನ್ಯಾಯಾಲಯವು ಪ್ರಾಸಿಕ್ಯೂಷನ್ ಆರೋಪಿಯ ವಿರುದ್ದದ ಆರೋಪವನ್ನು ಸಾಬೀತುಪಡಿಸಲು ವಿಫಲವಾಗಿದೆ ಎ೦ದು ನಿರ್ಣಯಿಸಿ ಆರೋಪಿಯನ್ನು ಖುಲಾಸೆಗೊಳಿಸಿದೆ.
ಆರೋಪಿ ಸುಧೀಂದ್ರ ಐತಾಳ್ ಪರವಾಗಿ ಕು೦ದಾಪುರದ ನ್ಯಾಯವಾದಿ ಶ್ಯಾಮಸುಂದರ್ ನಾಯರಿ ಹಾಗೂ ನೀಲ್ ಬ್ರಿಯಾನ್ ಪಿರೇರಾ ವಾದವನ್ನು ಮ೦ಡಿಸಿದ್ದರು.
Comments are closed.