ಆರೋಗ್ಯ

ರಾತ್ರಿ ಮೊಸರು ತಿನ್ನುವುದರಿಂದ ದೇಹದಲ್ಲಿ ಕಫದ ಪ್ರಮಾಣ ಅಧಿಕವಾಗುವುದು ಎಚ್ಚರ!

Pinterest LinkedIn Tumblr

ಮೊಸರನ್ನು ಯಾವಾಗ ಸೇವಿಸಬೇಕು ಹಾಗೂ ಯಾವಗ ಸೇವಿಸಬಾರದು ಎಂಬುದಾಗಿ ಸಾಮಾನ್ಯವಾಗಿ ಬಹಳಷ್ಟು ಜನಕ್ಕೆ ಈ ವಿಚಾರ ಗೊತ್ತಿರೋದಿಲ್ಲ. ಹೌದು ಕೆಲವರು ರಾತ್ರಿ ಊಟವಾದ ನಂತರ ಮೊಸರು ಸೇವನೆ ಮಾಡುತ್ತಾರೆ ಆದ್ರೆ ಇದರಿಂದ ಏನಾಗುತ್ತದೆ ಅನ್ನೋದು ತಿಳಿದಿರೋದಿಲ್ಲ. ಮೊಸರಿನಲ್ಲಿ ಆರೋಗ್ಯಕಾರಿ ಅಂಶಗಳಿವೆ ಆದ್ರೆ ಇದನ್ನು ಬೆಳ್ಳಿಗೆ ಅಥವಾ ಮಧ್ಯಾಹ್ನ ಸೇವನೆ ಮಾಡುವದು ಒಳ್ಳೆಯದು.

ರಾತ್ರಿ ಟೈಮ್ ಮೊಸರು ತಿನ್ನೋದ್ರಿಂದ ದೇಹದಲ್ಲಿ ‘ಕಫ ದೋಷ’ವನ್ನುಂಟು ಮಾಡುತ್ತದೆ. ಸಾಮಾನ್ಯವಾಗಿ ರಾತ್ರಿ ಹೊತ್ತು ನಮ್ಮ ದೇಹದಲ್ಲಿ ಕಫದ ಪ್ರಮಾಣ ಅಧಿಕವಾಗಿರುತ್ತದೆ. ಹಾಗಾಗಿ ರಾತ್ರಿ ವೇಳೆ ಮತ್ತೆ ಮೊಸರು ಸೇವಿಸಿದರೆ ಕಫ ಹೆಚ್ಚಾಗಿ ಮೂಗಿನ ನಾಳಗಳಲ್ಲಿ ಲೋಳೆ ಅಥವಾ ಸಿಂಬಳ ಜಾಸ್ತಿ ಆಗುವ ಸಾಧ್ಯತೆಗಳಿವೆ. ನೆನಪಿರಲಿ ಮೊಸರು ಸೇವನೆ ಮಾಡುವುದು ತೊಂದರೆಯಿನಿಲ್ಲ ಆದ್ರೆ ಕಫ, ಹಾಗು ಅಸ್ತಮಾ ಸಮಸ್ಯೆ ಇರುವವರು ರಾತ್ರಿವೇಳೆ ಮೊಸರು ಸೇವನೆ ಮಾಡುವುದು ಅಷ್ಟೊಂದು ಒಳ್ಳೆಯದಲ್ಲ ಅನ್ನೋದು ತಜ್ಞರ ಅಭಿಪ್ರಾಯವಾಗಿದೆ.

ಕೆಲವರಿಗೆ ಅಜೀರ್ಣತೆ ಸಮಸ್ಯೆ ಕಾಡುತ್ತದೆ ಅಂತವರು ರಾತ್ರಿ ಜೀರ್ಣಕ್ರೀಯೆ ಉತ್ತಮವಾಗಬೇಕಾದರೆ ಮಜ್ಜಿಗೆ ಅಥವಾ ಪುದೀನಾ ಮತ್ತು ಜೀರಿಗೆ ಸೇರಿಸಿದ ಮೊಸರು ಸೇವಿಸಬಹುದು.

Comments are closed.