
ದುಬೈ: ವಿರಾಟ್ ಕೊಹ್ಲಿಯನ್ನು ಟೀಕಿಸುವ ವೇಳೆ ಅವರ ಮಡದಿ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರ ವಿರುದ್ಧ ಅನುಷ್ಕಾ ಶರ್ಮಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹೇಳಿಕೆ ಕುರಿತು ತಮ್ಮ ಇನ್ ಸ್ಟಾಗ್ರಾಂನಲ್ಲಿ ಅನುಷ್ಕಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತಿಯ ಆಟಕ್ಕೆ ಪತ್ನಿಯನ್ನು ಏಕೆ ಎಳೆದು ತರುತ್ತೀರಾ? ನನ್ನ ಕುರಿತು ನೀವು ಹೇಳಿಕೆ ನೀಡಲು ಏಕೆ ಯೋಚಿಸಿದ್ದೀರಿ ಎಂಬುದನ್ನು ವಿವರಿಸಿ ಎಂದಿದ್ದಾರೆ.
ಕಿಂಗ್ಸ್ ಇಲೆವೆನ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಅವರು ಕೆಎಲ್ ರಾಹುಲ್ ಅವರ ಕ್ಯಾಚ್ ಅನ್ನು ಎರಡೆರಡು ಬಾರಿ ಕೈಚೆಲ್ಲಿದ್ದರು. ಇದೇ ಬೆಂಗಳೂರಿನ ಗೆಲುವಿಗೆ ಮುಳುವಾಯಿತು. ಕೊಹ್ಲಿಯಿಂದ ಎರಡೆರಡು ಬಾರಿ ಜೀವದಾನ ಪಡೆದ ಕನ್ನಡಿಗ, ಮೂಲತಃ ಮಂಗಳೂರಿನವರಾದ ರಾಹುಲ್ ಸ್ಫೋಟಕ ಬ್ಯಾಟಿಂಗ್ ಮುಂದುವರೆಸಿದರು.
ಆಗ ಕಾಮೆಂಟರಿ ನೀಡುತ್ತಿದ್ದ ಸುನಿಲ್ ಗವಾಸ್ಕರ್ ಕೊಹ್ಲಿಯನ್ನು ಟೀಕಿಸುವಾಗ, ಲಾಕ್ ಟೈಮ್ ವೇಳೆ ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ ಚೆಂಡುಗಳೊಂದಿಗೆ ಅಭ್ಯಾಸ ಮಾಡಿದ್ದಾರೆ ಎಂದಿದ್ದರು.
Comments are closed.