ಬೆಂಗಳೂರು: ಎಸ್.ಪಿ. ಬಾಲಸುಬ್ರಹ್ಮಣ್ಯಂ ತನ್ನ ಹುಟ್ಟೂರು ಆಂಧ್ರ ಸರ್ಕಾರದಿಂದ 24 ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಅವರಿಗೆ ಸಿಕ್ಕಿರುವ ಪ್ರಶಸ್ತಿಗಳು ಕೇವಲ 3 ಮಾತ್ರ.
ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಸ್ಯಾಂಡಲ್ ವುಡ್ ನಲ್ಲಿ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ. ಅವರಿಗೆ ಸಿಕ್ಕಿರುವ ಪ್ರಶಸ್ತಿಗಳು ಮಾತ್ರ ಮೂರು ಆಗಿವೆ.
ಎಸ್.ಪಿ. ಅವರು ರಾಜ್ಯ ಸರ್ಕಾರದಿಂದ ಪ್ರಶಸ್ತಿ ಪಡೆಯುವುದಕ್ಕೆ 30 ವರ್ಷಗಳು ಬೇಕಾಯಿತು. ಬಾಲಸುಬ್ರಹ್ಮಣ್ಯಂ ಅವರು ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿ 30 ವರ್ಷಗಳ ನಂತರ ‘ಓ ಮಲ್ಲಿಗೆ’ ಚಿತ್ರದ ‘ನೇಚರೇ ನಮ್ ಟೀಚರು …’ ಹಾಡಿಗೆ. ಕನ್ನಡೇತರರಿಗೆ ರಾಜ್ಯ ಸರ್ಕಾರದಿಂದ ರಾಜ್ಯ ಪ್ರಶಸ್ತಿಗಳನ್ನು ಕೊಡುವ ಪರಿಪಾಠವಿರಲಿಲ್ಲ. ಎಸ್ಪಿಬಿಯವರು ಮೂಲತಃ ಆಂಧ್ರದವರಾದ್ದರಿಂದ, ಅವರಿಗೆ ಸಹಜವಾಗಿಯೇ ಪ್ರಶಸ್ತಿ ಸಿಕ್ಕಿರಲಿಲ್ಲ.
Comments are closed.