ಡ್ರೈ ಫ್ರೂಟ್ಸ್‌ಗಳಲ್ಲಿ ಹಲವು ಬಗೆಗಳಿವೆ. ಎಲ್ಲವೂ ಅದರೆದ ಆದ ವೈಶಿಷ್ಟ ಗುಣಗಳಿಂದ ಕೂಡಿರುತ್ತದೆ. ಪ್ರೊಟೀನ್ ಹಾಗೂ ಫೈಬರ್ ಅಂಶಗಳು ಹೆಚ್ಚಾಗಿರುವ ಪಿಸ್ತಾದಲ್ಲಿ ನಮ್ಮ ದೇಹಕ್ಕೆ ಲಾಭದಾಯಕ ಆಗಿ ಹೇಗೆ ಬಳಸಿಕೊಳ್ಳಬಹುದು? ಇದರಿಂದ ನಮಗೆ ಏನೆಲ್ಲಾ ಪ್ರಯೋಜನಗಳು ಇವೆ ಎಂದು ತಿಳಿದುಕೊಳ್ಳೋಣ.
ಪಿಸ್ತಾದಲ್ಲಿ ಇರುವಂತಹ ವಿಟಮಿನ್ ಏ ಮತ್ತು ವಿಟಮಿನ್ ಈ ದೇಹದಲ್ಲಿ ಊತ ನೋವನ್ನು ಕಡಿಮೆ ಮಾಡುತ್ತದೆ. ಪದೇ ಪದೇ ಜ್ವರ ಬರುವುದು ಅಥವಾ ನಮ್ಮ ದೇಹದಲ್ಲಿ ಪದೇ ಪದೇ ಸುಸ್ತು ಆಯಾಸ ಆಗುತ್ತಿದ್ದರೆ ಅದರ ಅರ್ಥ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದೆ ಎಂದು ಅರ್ಥ.
ಪಿಸ್ತಾ ಒಂದು ಡ್ರೈ ಫ್ರೂಟ್ ಆಗಿದ್ದು ಇದರಲ್ಲಿ ಪ್ರೊಟೀನ್ ಹಾಗೂ ಫೈಬರ್ ಅಂಶಗಳು ಹೆಚ್ಚಾಗಿ ಇರುತ್ತವೆ. ಇದು ನಮ್ಮ ದೇಹಕ್ಕೆ ತುಂಬಾ ಪ್ರಯೋಜನಕಾರಿ ಆಗಿರುವಂತಹ ಒಂದು ಡ್ರೈ ಫ್ರೂಟ್ ಅಂತಾ ಹೇಳಬಹುದು. ನಾವು ಪಿಸ್ತಾ ತಿನ್ನುವುದರಿಂದ ನಮಗೆ ಏನೆಲ್ಲಾ ಲಾಭಗಳು ಇರಬಹುದು ಅಂತ ನೋಡುವುದಾದರೆ, ವಯಸ್ಸಾದಂತೆ ನಮಗೆ ಕಣ್ಣಿನ ದೃಷ್ಟಿ ಮಂದ ಆಗುವುದು. ಇದನ್ನು ತಪ್ಪಿಸಲು ನಾವು ಪ್ರತೀ ದಿನ ನಮ್ಮ ಆಹಾರದಲ್ಲಿ ಎರಡರಿಂದ ನಾಲ್ಕು ಪಿಸ್ತಾ ಬಳಕೆ ಮಾಡುವುದರಿಂದ ನಮಗೇ ಮುಂದೆ ಬರಬಹುದಾದ ಕಣ್ಣಿನ ತೊಂದರೆಯನ್ನು ತಡೆಯಬಹುದು. ಹಾಗೆ ಕೈ ಕಾಲುಗಳಲ್ಲಿ ಇದ್ದಕ್ಕಿದ್ದ ಹಾಗೆ ನೋವು ಊತ ಕಂಡುಬಂದರೆ ಕೂಡಾ ಪಿಸ್ತಾ ತಿನ್ನುವುದರಿಂದ ಕಡಿಮೆ ಆಗುವುದು.
ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪಿಸ್ತಾ ನಮಗೆ ತುಂಬಾ ಸಹಯಕಾರಿಯಾಗಿದೆ. ಹಾಗಾಗಿ ಪ್ರತೀ ದಿನ ಕೇವಲ ಎರಡರಿಂದ ನಾಲ್ಕು ಪಿಸ್ತಾ ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಚಿಕ್ಕಂದಿನಿಂದಲೇ ಪಿಸ್ತಾ ತಿನ್ನುವುದನ್ನು ಅಭ್ಯಾಸ ಮಾಡಿಕೊಂಡರೆ ಕ್ಯಾನ್ಸರ್ ಬರುವಂತಹ ಸಂಭವ ಇದ್ದರೆ ಕ್ಯಾನ್ಸರ್ ಬರದಂತೆ ಪಿಸ್ತಾ ತಡೆಯುತ್ತದೆ. ಪಿಸ್ಥಾದಲ್ಲಿ ಇರುವ ಬೀಟಾ ಕೆರೋಟಿನ್ ಹಾಗೂ ಪ್ರೊಟೀನ್ ಅಂಶಗಳು ಕ್ಯಾನ್ಸರ್ ಲಕ್ಷಣದ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ.
ಬಾದಾಮಿ ಮತ್ತು ಗೋಡಂಬಿಗೆ ಹೋಲಿಸಿದರೆ ಪಿಸ್ತಾ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನಬಹುದು. ನಮ್ಮ ನೆನಪಿನ ಶಕ್ತಿ ವೃದ್ಧಿಸಲು , ನರಮಂಡಲಗಳ ಬೆಳವಣಿಗೆಗೆ ಹಾಗೂ ನಮ್ಮ ಮೆದುಳಿನ ಆರೋಗ್ಯದ ದೃಷ್ಟಿಯಿಂದಲೂ ಸಹ ಪಿಸ್ತಾ ನಮಗೆ ತುಂಬಾ ಒಳ್ಳೆಯದು. ಡಯಾಬಿಟಿಸ್ ಇರುವವರು ಪಿಸ್ತಾ ಸೇವನೆ ಮಾಡುವುದು ಉತ್ತಮ. ಇದು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನೂ ಕಡಿಮೆ ಮಾಡುವುದು. ಹೈ ಬಿಪಿ ಅಥವಾ ಲೋ ಪಿಬಿ ಯನ್ನೂ ನಿಯಂತ್ರಿಸುವ ಸಾಮರ್ಥ್ಯ ಕೂಡಾ ಪಿಸ್ತಾ ಹೊಂದಿದೆ. ಪಿಸ್ತಾ ತಿನ್ನುವುದರಿಂದ ನಮ್ಮ ಚರ್ಮಕ್ಕೂ ಬಹಳ ಒಳ್ಳೆಯದು. ಚರ್ಮಕ್ಕೆ ಕಾಂತಿಯನ್ನು ಹೊಳಪನ್ನು ತಂದು ಕೊಡುತ್ತದೆ. ಆಗಾಗ ನಾವು ಪಿಸ್ತಾ ತಿನ್ನುವುದರಿಂದ ಬಿಪಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಇವಿಷ್ಟು ನಮಗೆ ನಾವು ಪಿಸ್ತಾ ತಿನ್ನುವುದರಿಂದ ಆಗುವ ಕೆಲವು ಪ್ರಯೋಜನಗಳು.
ನಮ್ಮ ದೇಹದಲ್ಲಿ ಒಂದುವೇಳೆ ಎದೆ ಉರಿತ ಕಂಡುಬಂದರೆ ಒಂದೆರಡು ಪಿಸ್ತಾ ತಿನ್ನುವುದರಿಂದ ಕಡಿಮೆ ಮಾಡಿಕೊಳ್ಳಬಹುದು. ಅಷ್ಟೇ ಅಲ್ಲದೆ ಗ್ಯಾಸ್ಟ್ರಿಕ್ ಸಮಸ್ಯೆ, ಪಿತ್ತದ ಸಮಸ್ಯೆ ಇದ್ದವರು ಕೂಡಾ ಪಿಸ್ತಾ ತಿನ್ನುವುದರಿಂದ ಈ ಎಲ್ಲಾ ಕಾಯಿಲೆಗಳನ್ನು ಶಮನ ಮಾಡಿಕೊಳ್ಳಬಹುದು. ದೊಡ್ಡವರಿಗೆ ಪ್ರತೀ ದಿನ ನಾಲ್ಕು ಪಿಸ್ತಾ ಹಾಗೂ ಚಿಕ್ಕ ಮಕ್ಕಳಿಗೆ ಎರಡು ಪಿಸ್ಥಾವನ್ನು ಪ್ರತೀ ದಿನ ಕೊಡಬಹುದು.

Comments are closed.