
ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಬಂಧನದಲ್ಲಿರುವ ನಟಿ ಸಂಜನಾರ ನ್ಯಾಯಾಂಗ ಬಂಧನವನ್ನು ಸೆ.30ರವರೆಗೆ ವಿಸ್ತರಿಸಿ ನ್ಯಾಯಾಲಯ ಆದೇಶ ನೀಡಿದೆ.
ಈ ಹಿಂದೆ ಸೆ.18ರವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಿ ಆದೇಶ ನೀಡಲಾಗಿತ್ತು. ಇಂದು ನ್ಯಾಯಾಂಗ ಬಂಧನ ಮುಕ್ತಾಯವಾದ ಹಿನ್ನಲೆ ಅವರನ್ನು ಮತ್ತೆ ಎನ್ಡಿಪಿಎಸ್ ಕೋರ್ಟ್ ಮುಂದೆ ಹಾಜರು ಪಡಿಸಲಾಗಿತ್ತು. ಈ ವೇಳೆ ವಿಡಿಯೋ ಕಾನ್ಫೆರನ್ಸ್ ಮೂಲಕ ಅವರ ವಿಚಾರಣೆ ನಡೆಸಿದ ನ್ಯಾಯಾಧೀಶರು ಈ ತಿಂಗಳು ಅಂತ್ಯದವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿದ್ದಾರೆ. ವಿಚಾರಣೆ ವೇಳೆ ನಟಿ ಸಂಜನಾ ಕಣ್ಣೀರು ಹಾಕಿರುವ ಘಟನೆ ಕೂಡ ನಡೆದಿದೆ. ನನ್ನ ಕಂಪನಿಯಲ್ಲಿ ನೂರಾರು ಉದ್ಯೋಗಿಗಳು ಕೆಲಸ ಮಾಡುತ್ತಿದ್ದು, ನಾನು ಜೈಲಿನಲ್ಲಿದ್ದರೆ, ಅವರು ಬೀದಿಗೆ ಬರುತ್ತಾರೆ. ತಮ್ಮನ್ನು ಬಿಡುಗಡೆ ಮಾಡಿ ಎಂದು ಕೇಳಿಕೊಂಡರು. ಅಲ್ಲದೇ ನನಗೆ ಪ್ರತಿದಿನ ರಕ್ತದೊತ್ತಡ ಹೆಚ್ಚಾಗುತ್ತಿದ್ದು, ಬಂಧನದಿಂದ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.
ತನಗೆ ಜಾಮೀನು ಸಿಗುತ್ತದೊ, ಇಲ್ಲವೋ ಎಂದು ನ್ಯಾಯಾಧೀಶರನ್ನೇ ಸಂಜನಾ ಕೇಳಿದ್ದಾರೆ. ಈ ವೇಳೆ ಅವರಿಗೆ ಉತ್ತರಿಸಿದ ನ್ಯಾಯಾಧೀಶರು, ನಿಮ್ಮ ಪರ ವಕೀಲರು ಹೇಳಿಕೆಗಳನ್ನು ದಾಖಲಿಸಿ ಅರ್ಜಿ ಸಲ್ಲಿಸಿದ್ದಾರೆ.
Comments are closed.