
ಚೆನ್ನೈ: ಇಲ್ಲೊಬ್ಬ ಸಿನಿಮಾ ನಟಿ ತಾನು ಮದುವೆಯಾದ ಪತಿ ಮನೆಯನ್ನೇ ದೋಚಿ ಸಿನಿಮಾ ಸ್ಟೈಲ್ನಲ್ಲಿ ನಾಪತ್ತೆಯಾಗಿದ್ದಾಳೆ. ಇದಕ್ಕೆ ನಟಿಯ ಗಂಡ ಕೂಡ ಬೆಂಬಲ ನೀಡಿದ್ದಾನೆ. ತಮಿಳಿನ ದೈವಿಮಗಳು ಧಾರಾವಾಹಿ ನಟಿ ಸುಚಿತ್ರಾ ಈ ಕೃತ್ಯದ ರೂವಾರಿ.
ಮದುವೆಗೆ ಅನುಮತಿ ಕೇಳಲು ಗಂಡನ ಮನೆಗೆ ಹೋದ ನಟಿ, ಹಣದ ಮುಗ್ಗಟ್ಟಿನಿಂದಾಗಿ ಈ ಕೃತ್ಯ ಎಸಗಿದ್ದಾಳೆ. ಅತ್ತೆ ಮನೆಯಲ್ಲಿ ಕಳ್ಳತನ ಮಾಡಲು ಗಂಡನ ಸಹಾಯ ಪಡೆದಿದ್ದು, ಸ್ವಂತಃ ಮನೆದೋಚಲು ಆತನಿಗೆ ತಿಳಿಸಿದ್ದಾಳೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇವರ ಹುಡುಕಾಟಕ್ಕೆ ಮುಂದಾಗಿದ್ದಾರೆ.
ತಮಿಳಿನ ಕಿರುತೆರೆ ನಟಿಯಾಗಿರುವ ಸುಚಿತ್ರ ಮಣಿಕಂದನ್ ಎಂಬಾತನನ್ನು ಪ್ರೀತಿಸಿ, ರಹಸ್ಯವಾಗಿ ಮದುವೆಯಾಗಿದ್ದಳು. ವೃತ್ತಿಯಲ್ಲಿ ಕಾರು ಚಾಲಕನಾಗಿರುವ ಮಣಿಕಂದನ್ ಗೆ ಶೂಟಿಂಗ್ ವೇಳೆ ಸುಚಿತ್ರಾಳ ಪರಿಚಯವಾಗಿತ್ತು.
ಇದಾದ ಬಳಿಕ ಮಣಿಕಂದನ್ ತನ್ನ ಮನೆಯವರಿಗೆ ಸುಚಿತ್ರಾಳ ಪರಿಚಯ ಮಾಡಿಸಲು ಕರೆದೊಯ್ದಿದ್ದಾನೆ. ಮೊದಲಿಗೆ ಅವರ ಮನೆಯವರು ವಿರೋಧಿಸಿದ್ದು, ನಂತರ ಅವರು ಒಪ್ಪಿಗೆ ನೀಡಿದ್ದಾರೆ
ಈ ವೇಳೆ ಹಣದ ಸಮಸ್ಯೆ ಎದುರಿಸುತ್ತಿದ್ದ ಸುಚಿತ್ರಾಗೆ ಮನೆಯಲ್ಲಿದ್ದ ಚಿನ್ನಾಭರಣ ಕಣ್ಣಿಗೆ ಕಂಡಿದೆ. ಅಲ್ಲದೇ ಈ ಹಣದಿಂದ ನಾವು ಕಿರುಚಿತ್ರ ತಯಾರಿಸಿ, ಯೂಟ್ಯೂಬ್ನಿಂದ ಹಣ ಸಂಪಾದಿಸಬಹುದು ಎಂದು ಗಂಡನನ್ನು ಒಪ್ಪಿಸಿದ್ದಾಳೆ.
ಇದಕ್ಕೆ ಒಪ್ಪಿದ ಮಣಿಕಂದನ್ ತನ್ನ ಮನೆಯನ್ನೇ ದರೋಡೆ ಮಾಡಲು ಸಿದ್ದನಾಗಿದ್ದಾನೆ. ಇದಕ್ಕಾಗಿ ಯೋಜನೆ ರೂಪಿಸಿದ್ದಾನೆ. ಮೊದಲಿಗೆ ಯಾರಿಗೂ ಅನುಮಾನ ಬರದಂತೆ ಸುಚಿತ್ರಾ ಮನೆಯಿಂದ ಚೆನ್ನೈಗೆ ಹೊರಟ್ಟಿದ್ದಾಳೆ. ಈಕೆ ಹೋದ ಬಳಿಕ ಮಣಿಕಂದನ್ ಮನೆಯಲ್ಲಿದ್ದ ನಗ ನಾಣ್ಯ ಕಳ್ಳತನ ಮಾಡಿದ್ದಾನೆ. ಈ ಕುರಿತು ಮಣಿಕಂದನ್ ಪೋಷಕರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Comments are closed.