ಮನೋರಂಜನೆ

‘ದಿಗ್ಗಜರು 2’ನಲ್ಲಿ ಸುದೀಪ್​, ದರ್ಶನ್​?

Pinterest LinkedIn Tumblr


ಬೆಂಗಳೂರು: ಉಪೇಂದ್ರ ನಿರ್ದೇಶನದಲ್ಲಿ ಮೂಡಿಬರಲಿರುವ ಚಿತ್ರಕ್ಕೆ ‘ದಿಗ್ಗಜರು 2’ ಎಂದು ಶೀರ್ಷಿಕೆ ಅಂತಿಮವಾಗಿದ್ದು, ಸುದೀಪ್​ ಮತ್ತು ದರ್ಶನ್​ ಮುಖ್ಯಭೂಮಿಕೆ ನಿಭಾಯಿಸಲಿದ್ದಾರಂತೆ. ಅಷ್ಟೇ ಅಲ್ಲ ಚಿತ್ರಕ್ಕೆ ಸಂಗೀತ ನಿರ್ದೇಶಕರನ್ನೂ ಫೈನಲ್​ ಮಾಡಲಾಗಿದೆ, ಅಜನೀಶ್​ ಲೋಕನಾಥ್​ ಮ್ಯೂಸಿಕ್​ ಹೊಣೆ ಹೊತ್ತಿದ್ದಾರಂತೆ.

ಸ್ಯಾಂಡಲ್​ವುಡ್​ ಅಂಗಳದಲ್ಲೀಗ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಇತ್ತೀಚೆಗಷ್ಟೇ ನಾನು ಮತ್ತೆ ನಿರ್ದೇಶನ ಮಾಡುವುದಕ್ಕೆ ಸಿದ್ಧನಾಗಿದ್ದೇನೆ. ಶೀಘ್ರದಲ್ಲಿಯೇ ಆ ಪ್ರಾಜೆಕ್ಟ್​ ಬಗ್ಗೆ ಹೇಳಲಿದ್ದೇನೆ ಎಂದಿದ್ದರು ಉಪೇಂದ್ರ. ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಅದಕ್ಕೆ ಸಂಬಂಧಿಸಿದ ಪೋಸ್ಟ್​ವೊಂದು ಹರಿದಾಡುತ್ತಿದೆ. ಅಚ್ಚರಿ ವಿಚಾರ ಏನೆಂದರೆ, ಆ ಚಿತ್ರದಲ್ಲಿ ಸ್ಯಾಂಡಲ್​ವುಡ್​ನ ಸ್ಟಾರ್ ನಟರಾದ ಕಿಚ್ಚ ಸುದೀಪ್​ ಮತ್ತು ಚಾಲೆಂಜಿಂಗ್​ ಸ್ಟಾರ್ ದರ್ಶನ್​ ನಟಿಸಲಿದ್ದಾರಂತೆ!

ಆನಂದ್​ ಆಡಿಯೋ ಸಂಸ್ಥೆ ಲೋಗೋದೊಂದಿಗೆ ಪೋಸ್ಟರ್ ಡಿಸೈನ್​ ಮಾಡಲಾಗಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಸುದೀಪ್​ ಮತ್ತು ದರ್ಶನ್​ ಅಭಿಮಾನಿಗಳು ಈ ವಿಚಾರವನ್ನು ಶೇರ್​ ಮಾಡಿಕೊಳ್ಳುತ್ತಿದ್ದಾರೆ. ಹಾಗಾದರೆ ಈ ಸಿನಿಮಾ ಆಗುತ್ತಿರುವುದು ನಿಜವೇ? ಈ ಪ್ರಶ್ನೆಗೆ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್​ ಪ್ರತಿಕ್ರಿಯೆ ನೀಡಿದ್ದಾರೆ.

‘ನನಗೆ ಈ ರೀತಿಯ ಯಾವ ಆಫರ್​ ಬಂದಿಲ್ಲ. ನನಗನಿಸಿದ ಮಟ್ಟಿಗೆ ಇದು ಅಭಿಮಾನಿಗಳು ತಮ್ಮ ಸಂತೋಷಕ್ಕೆ ಮಾಡಿಕೊಂಡ ಪೋಸ್ಟರ್​. ಈ ಕಾಂಬಿನೇಷನ್​ ಒಂದಾದರೆ, ನಮಗೂ ಸಂತೋಷವೇ. ಅಭಿಮಾನಿಗಳಿಗೂ ಹಬ್ಬಾನೇ’ ಎಂದಿದ್ದಾರೆ.

Comments are closed.