ಮನೋರಂಜನೆ

ಮೋದಿಯವರ ಹುಟ್ಟುಹಬ್ಬಕ್ಕೆ ವಿಡಿಯೋ ಹಂಚಿಕೊಂಡ ಬಾಲಿವುಡ್ ನಟಿ ಕಂಗನಾ ರಣಾವತ್

Pinterest LinkedIn Tumblr


ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು (ಗುರುವಾರ) ತಮ್ಮ 70 ನೇ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಖ್ಯಾತ ಬಾಲಿವುಡ್ ನಟಿ ಕಂಗನಾ ರನೌತ್ ಅವರು ವಿಡಿಯೋ ಹಂಚಿಕೊಳ್ಳುವ ಮೂಲಕ ಪಿಎಂ ಮೋದಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ.

ಈ ಸಂದರ್ಭದಲ್ಲಿ ವಿಡಿಯೋ ಹಂಚಿಕೊಂಡಿರುವ ಕಂಗನಾ, ” ಗೌರವಾನ್ವಿತ ಪ್ರಧಾನಿಗಳೇ ನಿಮಗೆ ನಿಮ್ಮ ಹುಟ್ಟುಹಬ್ಬದ ಅನೇಕ ಅಭಿನಂದನೆಗಳು. ನಿಮ್ಮೊಂದಿಗೆ ಸಂವಾದ ಸಾಧಿಸುವ ಅವಕಾಶ ನನಗೆ ಎಂದಿಗೂ ಸಿಕ್ಕಿಲ್ಲ. ಕೇವಲ ಫೋಟೋ ಸೆಶನ್ ಗಾಗಿ ಮಾತ್ರ ನಾವು ಭೇಟಿಯಾಗಿದ್ದೇವೆ. ಆದರೆ, ಈ ದೇಶ ನಿಮ್ಮನ್ನು ನಿಮ್ಮನ್ನು ತುಂಬಾ ಮೆಚ್ಚುತ್ತದೆ ಎಂದು ನಾನು ನಿಮಗೆ ಹೇಳಲು ಬಯಸುತ್ತೇನೆ. ನಿಮಗೆ ಅನಾನುಕೂಲ ಎನಿಸುವ ಸಾಕಷ್ಟು ಧ್ವನಿಗಳಿವೆ ಎಂಬುದು ನನಗೆ ತಿಳಿದಿದೆ. ಯಾರಿಗೂ ಕೂಡ ಇಷ್ಟೊಂದು ಅಪಮಾನಾಸ್ಪದ ಹೇಳಿಕೆಗಳನ್ನು ನೀಡಲಾಗುವುದಿಲ್ಲ. ಯಾವುದೇ ಓರ್ವ ಪ್ರಧಾನಿಗೆ ಇಷ್ಟೊಂದು ನಿಂದನೀಯ ಹಾಗೂ ಅಭದ್ರ ಭಾಷೆಯನ್ನೂ ಬಳಸಿರಲಿಕ್ಕಿಲ್ಲ. ಆದರೆ, ಅವರ ಸಂಖ್ಯೆ ತೀರಾ ಕಮ್ಮಿ ಎಂಬುದು ನಿಮಗೂ ತಿಳಿದಿದೆ. ಕೇವಲ ಅದೊಂದು ಪ್ರೊಪಗೇಂಡಾ ಮಾತ್ರ’ ಎಂದಿದ್ದಾರೆ.

‘ಆದರೆ, ಓರ್ವ ಸಾಮಾನ್ಯ ಭಾರತೀಯನ ಭಾವನೆಗಳನ್ನು ನಾನು ಗಮನಿಸಿದ್ದೇನೆ ಮತ್ತು ನಿಮಗೆ ಸಿಕ್ಕಿರುವಷ್ಟು ಸನ್ಮಾನ, ಭಕ್ತಿ ಹಾಗೂ ಪ್ರೀತಿ ಇತರ ಯಾವುದೇ ಪ್ರಧಾನಿಗೆ ಇದಕ್ಕೂ ಮೊದಲು ಸಿಕ್ಕಿದೆ ಎಂದು ನಾನು ಭಾವಿಸುವುದಿಲ್ಲ. ಆದರೆ, ಈ ಕೋಟ್ಯಾಂತರ ಸಾಮಾನ್ಯ ನಾಗರಿಕರು ಸಾಮಾಜಿಕ ಮಾಧ್ಯಮಗಳ ಮೇಲೆ ಇಲ್ಲ. ಅವರೆಲ್ಲರೂ ನಿಮ್ಮ ದೀರ್ಘಾಯುಷ್ಯಕಾಗಿ ಪ್ರಾರ್ಥಿಸುತ್ತಿದ್ದಾರೆ. ಅವರ ಧ್ವನಿ ನಿಮ್ಮ ಬಳಿಗೆ ತಲುಪುವುದಿಲ್ಲ. ನಿಮ್ಮಂತಹ ಪ್ರಧಾನಿ ಮಂತ್ರಿಯನ್ನು ಪಡೆದ ನಾವೆಲ್ಲರೂ ಭಾಗ್ಯಶಾಲಿಗಳಾಗಿದ್ದೇವೆ. ಜೈ ಹಿಂದ್ ‘ ಏನೂ ಕೂಡ ಕಂಗನಾ ಬರೆದಿದ್ದಾರೆ.

Comments are closed.