ಕರಾವಳಿ

ಕೃಷ್ಣಾಷ್ಟಮಿ: ಉಡುಪಿಯಲ್ಲಿ ರವಿ ಕಟಪಾಡಿಯ ‘ಕೊರೋನಾ ಇನ್ ಡ್ರ್ಯಾಗನ್’ ವೇಷ!

Pinterest LinkedIn Tumblr

ಉಡುಪಿ: ಪ್ರತಿ ವರ್ಷವೂ ಶ್ರೀಕೃಷ್ಣ ಜನ್ಮಾಷ್ಟಮಿ ಸಮಯದಲ್ಲಿ ವಿಭಿನ್ನವಾದ ವೇಷವನ್ನು ಧರಿಸುವ ರವಿ ಕಟಪಾಡಿ ಮತ್ತು ತಂಡ ಈ ಬಾರಿ ಕೊರೋನಾ ಜನಜಾಗೃತಿಯನ್ನು ಮೂಡಿಸುವ ಸಲುವಾಗಿ ಜಿಲ್ಲಾಡಳಿತದ ಅನುಮತಿಯ ಎರಡು ದಿನಗಳ ಕಾಲ ವೇಷದಾರಿಯಾಗಿ ತನ್ನ ತಂಡದೊಂದಿಗೆ ಕಟಪಾಡಿ ಉಡುಪಿ ಮಲ್ಪೆ ಪರಿಸರದಲ್ಲಿ ಸುತ್ತಾಟ ನಡೆಸಲಿದ್ದಾರೆ.

ಕಳೆದ ಎಂಟು ವರ್ಷಗಳಿಂದ ವೇಷಧಾರಿಯಾಗಿ ಸಂಗ್ರಹಿಸಲ್ಪಟ್ಟ ಹಣವನ್ನು ಅಸಹಾಯಕ ಬಡ ಮಕ್ಕಳಿಗೆ ನೀಡುತ್ತಿದ್ದ ರವಿ ಕಟಪಾಡಿ ಈ ಬಾರಿ ಕೋವಿಡ್ ಪರಿಣಾಮ ಧನ ಸಂಗ್ರಹವನ್ನು ಮಾಡುವುದಿಲ್ಲ. ಬದಲಾಗಿ ಜನರಲ್ಲಿ ಕೋವಿಡ್ ಜಾಗೃತಿಯನ್ನು ಮೂಡಿಸುವ ಸಲುವಾಗಿ ‘ಕೊರೋನಾ ಇನ್ ಡ್ರ್ಯಾಗನ್’ ವೇಷದಾರಿಯಾಗಿ ಸಂಚರಿಸಲಿದ್ದಾರೆ.

ಈ ಬಾರಿಯ ಜನಜಾಗೃತಿ ಕಾರ್ಯಕ್ರಮಕ್ಕೆ ಕಟಪಾಡಿ ಪೇಟೆಯಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ ಅವರು ಚಾಲನೆಯನ್ನು ನೀಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಇನಾಯತ್ ಉಲ್ಲಾ ಬೇಗಾ ಇದ್ದರು.

Comments are closed.