
ಅಯೋಧ್ಯೆ: ನಕಲಿ ಚೆಕ್ಗಳನ್ನು ಬಳಸಿ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಖಾತೆಯಿಂದ ಲಕ್ಷಾಂತರ ರೂಪಾಯಿಗಳನ್ನು ವಿತ್ಡ್ರಾ ಮಾಡಿಕೊಂಡಿರುವ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.
ಲಖನೌದ ಬ್ಯಾಂಕ್ನಲ್ಲಿ ಇರುವ ಖಾತೆಗಳಿಂದ ಹಣವನ್ನು ಲಪಟಾಯಿಸಲಾಗಿದೆ. ಎರಡು ಖಾತೆಗಳಿಂದ ಈ ಹಣವನ್ನು ವಿತ್ಡ್ರಾ ಮಾಡಲಾಗಿದೆ. ಎರಡು ಬಾರಿ ಮೊದಲು ವಿತ್ಡ್ರಾ ಮಾಡಲಾಗಿದೆ. ಮೂರನೆ ಬಾರಿ ಹಣ ವಿತ್ಡ್ರಾ ಮಾಡಲು ಪ್ರಯತ್ನಿಸಿದಾಗ, ಬ್ಯಾಂಕ್ನವರಿಗೆ ಸಂದೇಹ ಬಂದಿದೆ. ಅವರು ಕೂಡಲೇ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ. ಆಗಲೇ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಮೊದಲು ಹಣವನ್ನು ಸೆಪ್ಟೆಂಬರ್ 1ರಂದು ವಿತ್ಡ್ರಾ ಮಾಡಿಕೊಳ್ಳಲಾಗಿದೆ. ನಂತರ 3ನೇ ತಾರೀಖು ಮತ್ತೆ ಹಣವನ್ನು ವಿತ್ಡ್ರಾ ಮಾಡಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮೂರನೇ ಬಾರಿಗೆ ಲಖನೌದ ಬ್ಯಾಂಕ್ ಆಫ್ ಬರೋಡಾದಲ್ಲಿ 9.86 ಲಕ್ಷ ಚೆಕ್ ವಿತ್ ಡ್ರಾ ಮಾಡುವ ಸಂದರ್ಭದಲ್ಲಿ ಚಂಪತ್ ರಾಯ್ ಅವರಿಗೆ ಕರೆ ಹೋಗಿದೆ. ಈ ಕುರಿತು ಅಪರಿಚಿತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿರುವುದಾಗಿ ತಿಳಿದು ಬಂದಿದೆ.
Comments are closed.