ರಾಷ್ಟ್ರೀಯ

ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಖಾತೆಗೆ ಕನ್ನ: ಲಕ್ಷಾಂತರ ರೂ. ವಿತ್​ಡ್ರಾ!

Pinterest LinkedIn Tumblr


ಅಯೋಧ್ಯೆ: ನಕಲಿ ಚೆಕ್​ಗಳನ್ನು ಬಳಸಿ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಖಾತೆಯಿಂದ ಲಕ್ಷಾಂತರ ರೂಪಾಯಿಗಳನ್ನು ವಿತ್​ಡ್ರಾ ಮಾಡಿಕೊಂಡಿರುವ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.

ಲಖನೌದ ಬ್ಯಾಂಕ್​ನಲ್ಲಿ ಇರುವ ಖಾತೆಗಳಿಂದ ಹಣವನ್ನು ಲಪಟಾಯಿಸಲಾಗಿದೆ. ಎರಡು ಖಾತೆಗಳಿಂದ ಈ ಹಣವನ್ನು ವಿತ್​ಡ್ರಾ ಮಾಡಲಾಗಿದೆ. ಎರಡು ಬಾರಿ ಮೊದಲು ವಿತ್​ಡ್ರಾ ಮಾಡಲಾಗಿದೆ. ಮೂರನೆ ಬಾರಿ ಹಣ ವಿತ್​ಡ್ರಾ ಮಾಡಲು ಪ್ರಯತ್ನಿಸಿದಾಗ, ಬ್ಯಾಂಕ್​ನವರಿಗೆ ಸಂದೇಹ ಬಂದಿದೆ. ಅವರು ಕೂಡಲೇ ಟ್ರಸ್ಟ್​ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ. ಆಗಲೇ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಮೊದಲು ಹಣವನ್ನು ಸೆಪ್ಟೆಂಬರ್ 1ರಂದು ವಿತ್​ಡ್ರಾ ಮಾಡಿಕೊಳ್ಳಲಾಗಿದೆ. ನಂತರ 3ನೇ ತಾರೀಖು ಮತ್ತೆ ಹಣವನ್ನು ವಿತ್​ಡ್ರಾ ಮಾಡಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮೂರನೇ ಬಾರಿಗೆ ಲಖನೌದ ಬ್ಯಾಂಕ್ ಆಫ್ ಬರೋಡಾದಲ್ಲಿ 9.86 ಲಕ್ಷ ಚೆಕ್ ವಿತ್ ಡ್ರಾ ಮಾಡುವ ಸಂದರ್ಭದಲ್ಲಿ ಚಂಪತ್ ರಾಯ್ ಅವರಿಗೆ ಕರೆ ಹೋಗಿದೆ. ಈ ಕುರಿತು ಅಪರಿಚಿತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿರುವುದಾಗಿ ತಿಳಿದು ಬಂದಿದೆ.

Comments are closed.