ಉತ್ತರಕನ್ನಡ (ಹೊನ್ನಾವರ): ಮೀನುಗಾರಿಕೆಗೆ ತೆರಳಿದ್ದ ಯಾಂತ್ರೀಕೃತ ಬೋಟ್ ವೊಂದು (ಪರ್ಸೀನ್ ಬೋಟ್) ಅಳಿವೆಯಲ್ಲಿ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗಡೆಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಗುರುವಾರ ನಡೆದಿದೆ.

ಸೈಂಟ್ ಅಂತೋನಿ ಎಂಬ ಹೆಸರಿನ ಬೋಟ್ ಇದಾಗಿದ್ದು ಇದರಲ್ಲಿ 25 ಮೀನುಗಾರರು ಇದ್ದರು. ಅದ್ರಷ್ಟವಶಾತ್ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಇಂದು ಬೆಳಿಗ್ಗೆ ಮೀನುಗಾರಿಕೆಗೆ ತೆರಳುವ ವೇಳೆ ಈ ಘಟನೆ ನಡೆದಿದ್ದು ಸಮೀಪದ ಬೋಟ್ ನಲ್ಲಿದ್ದ ಮೀನುಗಾರರು ಮುಳುಗುತ್ತಿರುವ ಬೋಟಿನಿಂದ ಮೀನುಗಾರನ್ನು ರಕ್ಷಿಸಿದ್ದಾರೆ.
Comments are closed.