ನವದೆಹಲಿ: ಮೀನುಗಾರಿಕೆ ಕ್ಷೇತ್ರದಲ್ಲಿ ಉತ್ಪಾದನೆ ಹೆಚ್ಚಳ ಮತ್ತು ರಫ್ತು ಪ್ರಮಾಣವನ್ನು ಏರಿಸುವುದಕ್ಕಾಗಿ ರೂ.20,050 ಕೋಟಿ ಮೊತ್ತದ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಗೆ ಪ್ರಧಾನಿ ಚಾಲನೆ ನೀಡಿದರು.
ಹೈನುಗಾರಿಕೆ ಕುರಿತು ರೈತರಿಗೆ ಮಾಹಿತಿ ನೀಡುವ ‘ಇ-ಗೋಪಾಲ’ ಮೊಬೈಲ್ ಅಪ್ಲಿಕೇಷನ್ ಉದ್ಘಾಟಿಸಿದರು. ನಂತರ ಬಿಹಾರ ರಾಜ್ಯ ಸರ್ಕಾರದ ಸಹಯೋಗದಲ್ಲಿ ಪುರ್ನಿಯಾದಲ್ಲಿ75 ಎಕರೆಯಲ್ಲಿ ರೂ.84.27 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿ ಸೆಮನ್ ಸ್ಟೇಷನ್ ಉದ್ಘಾಟಿಸಿದರು.
ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ‘ಕೊರೊನಾ ವೈರಸ್ ಸೋಂಕನ್ನು ತೀರ ಲಘುವಾಗಿ ಪರಿಗಣಿಸಬೇಡಿ ಎಂದು ಎಚ್ಚರಿಸಿದರು. ‘ವಿಜ್ಞಾನಿಗಳು ಕೊರೊನಾ ಸೋಂಕಿಗೆ ಲಸಿಕೆಯನ್ನು ಅಭಿವೃದ್ಧಿಪಡಿಸುವವರೆಗೂ, ಮಾಸ್ಕ್ ಧರಿಸುವುದು ಮತ್ತು ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವಂತಹ ನಿಯಮಗಳನ್ನು ಅನುಸರಿಸಬೇಕು’ ಎಂದು ಹೇಳಿದರು.
Comments are closed.