ಕರಾವಳಿ

ಇಂದು ಆನ್‌ಲೈನ್‌ನಲ್ಲಿ ರಾಷ್ಟ್ರೀಯ ಮಕ್ಕಳ ಉತ್ಸವ – ಶ್ರೀ ಕೃಷ್ಣ ವೇಷ ಸ್ಪರ್ಧೆ: ನೇರ ಪ್ರಸಾರ

Pinterest LinkedIn Tumblr

ಮಂಗಳೂರು, ಸೆಪ್ಟಂಬರ್.10:ಕಲ್ಕೂರ ಪ್ರತಿಷ್ಠಾನವು ಆನ್ ಲೈನ್ ಮೂಲಕ ಆಯೋಜಿಸಿರುವ ರಾಷ್ಟ್ರೀಯ ಮಕ್ಕಳ ಉತ್ಸವ ಕೃಷ್ಣ ವೇಷ ಸ್ಪರ್ಧೆಯ ಉದ್ಘಾಟನಾ ಸಮಾರಂಭವು ಇಂದು ಅಪರಾಹ್ನ 12.30 ಗಂಟೆಗೆ ಗಣ್ಯಾತಿ ಗಣ್ಯರಿಂದ ನೆರವೇರಲಿದೆ. ಒಟ್ಟು 37 ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು ಈ ಎಲ್ಲಾ ಕಾರ್ಯಕ್ರಮಗಳು ಬೆಳಗ್ಗೆ 9ರಿಂದ ರಾತ್ರಿ 12ರ ತನಕ ನಮ್ಮ ಕುಡ ಚಾನೆಲ್ ನೇರ ಪ್ರಸಾರವಾಗಲಿದೆ.

(ಕಡತ ಚಿತ್ರ)

ಬೆಳಗ್ಗೆ 9 ರಿಂದ ಅಪರಾಹ್ನ12.30ರವರೆಗೆ ಶ್ರೀ ಕೃಷ್ಣ ವರ್ಣ ವೈಭವ, ಶ್ರೀ ಕೃಷ್ಣ ಗಾನ ವೈಭವ, ರಂಗೋಲಿಯಲ್ಲಿ ಶ್ರೀ ಕೃಷ್ಣ, ಛಾಯ ಕೃಷ್ಣ, ಶಂಖ ನಾದ, ಶಂಖ ಉದ್ಘೋಷ, ಗೀತಾ ಕೃಷ್ಣ ನಂತರ ಮಧ್ಯಾಹ್ನ 12.30ರಿಂದ ತೊಟ್ಟಿಲ ಕೃಷ್ಣ, ವೃಕ್ಷ ಕೃಷ್ಣ, ಕಂದ ಕೃಷ್ಣ, ಮುದ್ದು ಕೃಷ್ಣ, ತುಂಟ ಕೃಷ್ಣ, ಬಾಲ ಕೃಷ್ಣ, ಕಿಶೋರ ಕೃಷ್ಣ, ಶ್ರೀ ಕೃಷ್ಣ, ರಾಧಾ ಕೃಷ್ಣ, ರಾಧಾ ಮಾಧವ, ದೇವಕಿ ಕೃಷ್ಣ, ಯಶೋಧ ಕೃಷ್ಣ, ಯಕ್ಷ ಕೃಷ್ಣ, ವಸುದೇವ ಕೃಷ್ಣ, ನಂದಗೋಕುಲ, ಸಂಜೆ 6ರಿಂದ 7ರವರೆಗೆ ಅಚ್ಯುತ ಮತ್ತು ಮಾಧವ ರಸಪ್ರಶ್ನೆ ನೇರಪ್ರಸಾರದಲ್ಲಿ ನೆರವೇರಲಿದೆ.

ರಾತ್ರಿ 9.30ಕ್ಕೆ ಸಮಾರೋಪ ಸಮಾರಂಭ ಹಾಗೂ ಆನ್ ಲೈನ್ ಕೃಷ್ಣ ವೇಷ ಸ್ಪರ್ಧೆಯ ವಿಜೇತರನ್ನು ಘೋಷಣೆ ಮಾಡಲಾಗುವುದು.

ನೇರಪ್ರಸಾರದಲ್ಲಿ ರಾತ್ರಿ 11.30ಕ್ಕೆ ಶ್ರೀಕೃಷ್ಣ ದೇವರಿಗೆ ಅರ್ಘ್ಯ ಪ್ರದಾನ ನಡೆಯಲಿದೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ತಿಳಿಸಿದ್ದಾರೆ.

Comments are closed.