ಮನೋರಂಜನೆ

‘ಐ ಆ್ಯಮ್​ ಸಿಂಗಲ್’​: ರಶ್ಮಿಕಾ ಮಂದಣ್ಣ

Pinterest LinkedIn Tumblr


ರಶ್ಮಿಕಾ ಮಂದಣ್ಣ ಸೌತ್​ ಸಿನಿರಂಗದ ಚೆಂದುಳ್ಳಿ ಚೆಲುವೆ..ತಮ್ಮ ನಟನೆಯಿಂದಲ್ಲೇ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ಸಾನ್ವಿ..ನಿಂತ್ರೂ ಸುದ್ದಿನೇ..ಕೂತ್ರೂ ಸುದ್ದಿನೇ… ಈಗ ರಶ್ಮಿಕಾ ‘ಐ ಆ್ಯಮಿ ಸಿಂಗಲ್​’ ಅಂತ ಹೇಳಿದ್ದಾರೆ.

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಅದ್ಯಾವ ಶುಭಗಳಿಗೆಯಲ್ಲಿ ಸ್ಯಾಂಡಲ್​​ವುಡ್​ಗೆ ಎಂಟ್ರಿ ಕೊಟ್ರೋ ನೋಡಿ, ಅಭಿಮಾನಿಗಳು ಈ ಚೆಲುವೆಯ ನೋಟಕ್ಕೆ ಫುಲ್​​ ಫಿದಾ ಆದ್ರು. ಅಂದಿನಿಂದ ಹುಡುಗುರು ಕುಂತಲ್ಲಿ ನಿಂತಲ್ಲಿ ಕೊಡಗಿನ ಕುವರಿಯ ಜಪ ಮಾಡ್ತಿದ್ದಾರೆ. ಬರೀ ಕನ್ನಡ ಹೈಕ್ಳು ಅಷ್ಟೇ ಅಲ್ಲ ಟಾಲಿವುಡ್​​ ಅಬ್ಬಾಯಿಗಳು ಕೂಡ ಗೀತಾಳ ಧ್ಯಾನದಲ್ಲಿ ಮುಳುಗಿದ್ದಾರೆ. ಹೀಗೆ ಸೌತ್​​ ದುನಿಯಾದಲ್ಲಿ ಸಖತ್ ಕವಾ ಕ್ರಿಯೇಟ್ ಮಾಡಿ ಸದ್ಯ ಟಾಪ್​ ಟ್ರೇಡಿಂಗ್​​ನಲ್ಲಿ ತನ್ನದೇ ಹವಾ ಸೃಷ್ಠಿ ಮಾಡ್ತಿದ್ದಾಳೆ ಈ ಚಷ್ಮಾ ಬೆಡಗಿ.

ರಶ್ಮಿಕಾ ಇತ್ತಿಚೆಗೆ ಬಹುಭಾಷೆಗಳಲ್ಲಿ ತಮ್ಮ ಕ್ಯೂಟ್​​ ಕ್ಯೂಟ್​ ನಟನೆಯಿಂದ ಮೋಡಿ ಮಾಡುತ್ತಾ, ತನ್ನದೇ ಫ್ಯಾನ್ಸ್​​ ಫಾಲೋಯಿಂಗ್​​ ಹೊಂದಿದ್ದಾರೆ. ಬರೀ ಹುಡಗರಿಗೆ ಮಾತ್ರವಲ್ಲ ದೊಡ್ಡವರಿಂದ ಹಿಡಿದು ಚಿಕ್ಕ ಮಕ್ಕಳಿಗೂ ರಶ್ಮಿಕಾನೇ ಫೇವರೇಟ್​​​ ನಟಿ….ಸೆಟ್​​ನಲ್ಲಿ ಲವಲವಿಕೆಯಿಂದ ಪ್ರೇಂಡ್ಲಿ ಆಗಿ, ಎಲ್ಲರನ್ನ ನಗಿಸುತ್ತಾ ಓಡಾಡಿಕೊಂಡು ಇರುವುದೇ ಕರುನಾಡ ಕ್ರಶ್ ರಶ್ಮಿಕಾಳ ಪ್ಲೇಸ್​​ ಪಾಯಿಂಟ್​​. ಹೀಗಾಗಿ ರಶ್ಮಿಕಾ ಅಂದ್ರೆ ಎಲ್ಲ ಸ್ಟಾರ್​​​ ಹೀರೋಗಳಿಗೂ ಅಚ್ಚುಮೆಚ್ಚು.

ರಶ್ಮಿಕಾ-ರಕ್ಷಿತ್​​ ಲವ್ವಿ-ಡವ್ವಿ ಮುರಿದು ಬಿದ್ದು ಮೇಲೆ, ಸೌತ್ ರಂಗದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ರು ಕಿರಿಕ್​ ಬೆಡಗಿ. ಇದರ ಬೆನ್ನಲ್ಲೇ ರಶ್ಮಿಕಾ ಹೆಸ್ರು ಕೆಲ ಸ್ಟಾರ್​ ಹೀರೋಗಳ ಜೊತೆ ತಳುಕು ಹಾಕಿಕೊಂಡಿತ್ತು.​​ ಆದ್ರೆ ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದ ಸಾನ್ವಿ, ಇಂತ ವಿಷಯಗಳಿಗೆ ಡೋಂಟ್​​ ಕೇರ್​ ಅಂದಿದ್ರು. ನಂತ್ರ ಸಿನಿಮಾ, ಫೋಟೋಶೂಟ್​ ಅಂತ ಎಷ್ಟೇ ಬ್ಯುಸಿಯಾಗಿದ್ರು ಕೂಡ, ಅಭಿಮಾನಿಗಳ ಜೊತೆ ಮಾತ್ರ ನಿರಂತರ ಸಂರ್ಪಕದಲಿದ್ರು. ಫ್ಯಾನ್ಸ್​ ಏನೇ ಪ್ರಶ್ನಿ ಕೇಳಿದ್ರು ಸಹ ನಗ್ತ್ತಾ -ನಗ್ತಾ ಉತ್ತರಿಸುತ್ತಿದ್ರು.

ಚಷ್ಮಾ ಬೆಡಗಿ ರಶ್ಮಿಕಾ ಈ ಸಿಂಗಲ್​ ಅಂತೆ..ನಂಬ್ತಿರಾ..? ಖಂಡಿತಾ ನಂಬಲೇ ಬೇಕು. ಸೆಲಬ್ರೆಟಿಗಳು ಇನ್​ಸ್ಟಾಗ್ರಾಮ್​​, ಫೇಸ್​ಬುಕ್​ನಲ್ಲಿ ಲೈವ್​, ಸ್ಟೇಟಸ್​​ ಹಾಕಿಕೊಂಡಿದ್ರೆ, ರಿಲೇಶನ್‌ಶಿಪ್, ಲವ್, ಮದುವೆ ಬಗ್ಗೆ ಪ್ರಶ್ನೆ ಕೇಳುವುದು ಸರ್ವೇ ಸಾಮಾನ್ಯ..ಹೀಗೆ ರಶ್ಮಿಕಾಗು ಸಹ ಇನ್​ಸ್ಟಾಗ್ರಮ್​ನಲ್ಲಿ ಇದೇ ತರಹದ ಪ್ರಶ್ನೆ ಕೇಳಿದ್ರು.

ಇದಕ್ಕೆ ಸಾನ್ವಿ ನಗುನಗುತ್ತಲೇ ಐ ಆ್ಯಮ್​ ಸಿಂಗಲ್​ ಅಂತ ಉತ್ತರಿಸಿದ್ದಾರೆ. ಇಷ್ಟೆ ಅಲ್ಲ ಸ್ವಾಮಿ ಹಲವು ಸ್ಟಾರ್​​ ನಟನರ ಜೊತೆ ನನ್ನ ಹೆಸರು ತಳುಕು ಹಾಕಿಕೊಂಡಿದು ನನಗೆ ಗೊತ್ತು..ಆದ್ರೆ ಇದ್ಯಾವುದಕ್ಕು ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ಸಿಂಗಲ್​ ಆಗಿರುವುದಕ್ಕೆ ಇಷ್ಟ, ನಾನು ಹೀಗೆ ಇರುತ್ತೇನೆ..ಇದನ್ನ ನೀವು ನಂಬಲೇ ಬೇಕು ಅಂತ ಹೇಳಿದ್ದಾರೆ.

ಈ ರಶ್ಮಿಕಾ ಮಾತು ಕೇಳಿ ಅಭಿಮಾನಿಗಳಲ್ಲಿ ಕುತೂಹಲದ ಜೊತೆಗೆ ಆಶ್ಚರ್ಯ ಸಹ ಆಗಿದೆ. ಯಾಕಂದ್ರೆ ಮತ್ತೆ ಸಾನ್ವಿ ಲವ್​ನಲ್ಲಿ ಬಿದ್ದಿದಾರಾ..? ಅಥವಾ ನಿಜಾವಾಗಲೂ ಸಾನ್ವಿ ಸಿಂಗಲ್​ ಅನ್ನೊ ಗೊಂದಲಿದ್ದಾರೆ ಫ್ಯಾನ್ಸ್​​…ರಶ್ಮಿಕಾ ಎಂಗೇಜ್​ ಆಗಿದ್ರೆ ಸಾಕಷ್ಟು ಹುಡುಗರ ಹಾಟ್​​ ಬ್ರೇಕ್​ ಆಗುತ್ತೇ.

Comments are closed.