ರಾಷ್ಟ್ರೀಯ

ಬ್ಯಾಂಕ್ ಸಾಲಗಾರರಿಗೆ ಸಿಹಿ ಸುದ್ದಿ ನೀಡಲಿರುವ RBI

Pinterest LinkedIn Tumblr


ಎರಡು ವರ್ಷ ಸಾಲ ಮರುಪಾವತಿ ರಿಲ್ಯಾಕ್ಸ್​ ಕೊಡಲು ರಿಸರ್ವ್​ ಬ್ಯಾಂಕ್ ಆಫ್ ಇಂಡಿಯಾ ಚಿಂತನೆ ನಡೆಸಿದ್ದು, ಶೀಘ್ರದಲ್ಲೇ ಸಾಲಗಾರರಿಗೆ ಭರ್ಜರಿ ಗುಡ್​ನ್ಯೂಸ್​ ನೀಡಲಿದೆ.

ಕಿಲ್ಲರ್ ಕೊರೋನಾ ಓಟಕ್ಕೆ ಬ್ರೇಕ್ ಹಾಕಲು ದೇಶದಾದ್ಯಂತ ಲಾಕ್​ಡೌನ್ ಜಾರಿಗೆ ತರಲಾಯಿತು. ಇದರಿಂದ ಹಲವು ಕ್ಷೇತ್ರಗಳಲ್ಲಿ ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್​​ ಮುಂದೆ ಸಾಲ ಮರುಪಾವತಿ ಅವಧಿ ವಿಸ್ತರಣೆ ಪ್ರಸ್ತಾಪ ಎದ್ದಿದ್ದು, ಸಾಲ ಮರುಪಾವತಿ ಅವಧಿ ವಿಸ್ತರಿಸಲು ಸಿದ್ಧ ಅಂತಾ RBI ಹಾಗೂ ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ.

ಕೇಂದ್ರ ಹಾಗೂ ಆರ್​ಬಿಐ ಪರ ಕೋರ್ಟ್​ ಮುಂದೆ ಹಾಜರಾದ ತುಷಾರ್ ಮೆಹ್ತಾ, ಕೊರೋನಾದಿಂದ ಸಂಕಷ್ಟಕ್ಕೆ ಸಿಲುಕಿರೋ ವಲಯ ಗುರುತಿಸುತ್ತಿದ್ದೇವೆ. ಎಲ್ಲಾ ರೀತಿಯ ಪರಿಹಾರ ದಾರಿಗಳನ್ನು ಕೇಂದ್ರ ಹುಡುಕುತ್ತಿದೆ ಎಂದು ಸುಪ್ರೀಂ ಕೋರ್ಟ್​ಗೆ ಸಾಲಿಸಿಟರ್​​ ಜನರಲ್​​ ತುಷಾರ್​​ ಮೆಹ್ತಾ ಮಾಹಿತಿ ನೀಡಿದ್ದಾರೆ.

ಸಾಲಗಳ ಮೇಲಿನ ಬಡ್ಡಿ ಮನ್ನಾ, ಬಡ್ಡಿ ಮೇಲಿನ ಬಡ್ಡಿ ಮನ್ನಾಗೆ ಅರ್ಜಿ ಕೈಗೆತ್ತುಕೊಳ್ಳಲಾಗಿತ್ತು. 6 ತಿಂಗಳವರೆಗೂ ಸಾಲ ಮರುಪಾವತಿಗೆ ಕೇಂದ್ರ ಅವಧಿ ವಿಸ್ತರಿಸಿದ್ದು, ವಿಚಾರಣೆಯನ್ನ ಬುಧವಾರಕ್ಕೆ ಮುಂದೂಡಲಾಗಿದೆ.

Comments are closed.