ಕರ್ನಾಟಕ

ಆತ್ಮಹತ್ಯೆ ಮಾಡಿಕೊಳ್ಳಲು ಜೋಗಕ್ಕೆ ಹೋಗಿದ್ದ…ಆದ್ರೆ ಮುಂದಾಗಿದ್ದೇ ಬೇರೆ…!

Pinterest LinkedIn Tumblr


ಶಿವಮೊಗ್ಗ: ಆತ್ಮಹತ್ಯೆ ಮಾಡಿಕೊಳ್ಳಲು ವಿಶ್ವವಿಖ್ಯಾತ ಜೋಗಕ್ಕೆ ತೆರಳಿದ್ದ ವ್ಯಕ್ತಿ, ಇದೀಗ ವಾಪಸ್​ ಆಗಿದ್ದಾರೆ. ಅದಕ್ಕೆ ಕಾರಣ ಪೊಲೀಸರು..!

ಬೆಂಗಳೂರು ಇಂದಿರಾನಗರದ ಚೇತನ್​ ಕುಮಾರ್​(34) ರಾಣಿ ಫಾಲ್ಸ್​ನಿಂದ ಕೆಳಗೆ ಬೀಳಲು ಯತ್ನಿಸುತ್ತಿದ್ದ. ಪೊಲೀಸರ ಸಮಯ ಪ್ರಜ್ಞೆಯಿಂದ‌ ಇದೀಗ ಆತನ ಜೀವ ಉಳಿದಿದೆ.

ಎಂಬಿಎ ಪದವೀಧರನಾದ ಚೇತನ್​​ ಕುಮಾರ್ ಆತ್ಮಹತ್ಯೆ ಮಾಡಿಕೊಳ್ಳಲೆಂದು ಜೋಗಕ್ಕೆ ಹೋಗಿ, ರಾಣಿ ಫಾಲ್ಸ್​​ನ ಮೇಲ್ಭಾಗಕ್ಕೆ ತೆರಳಿ ಕುಳಿತಿದ್ದರು.

ಆತನನ್ನು ನೋಡಿದ ಜೋಗ ಪೊಲೀಸರು, ಸಾಗರದ ಹಿರಿಯ ಪೊಲೀಸ್​ ಅಧಿಕಾರಿಗಳಿಗೆ, ಅಗ್ನಿಶಾಮಕದಳದವರಿಗೆ ಫೋನ್​ ಮಾಡಿ ವಿಷಯ ತಿಳಿಸಿದ್ದರು. ಹಾಗೇ, ಅವರು ಬರುವವರೆಗೆ ಅಲ್ಲಿಯೇ ಇದ್ದು ಕಾಯುತ್ತಿದ್ದರು. ನಂತರ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಸೇರಿ ಚೇತನ್​ ಅವರ ಮನವೊಲಿಸಿ, ವಾಪಸ್​ ಕರೆತಂದಿದ್ದಾರೆ.
ಚೇತನ್​ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಆತ್ಮಹತ್ಯೆಗೆ ಮುಂದಾಗಿದ್ದ ಎನ್ನಲಾಗಿದೆ. ಜೋಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.