ರಾಷ್ಟ್ರೀಯ

ಅನ್​ಲಾಕ್​ 4.0: ಮೆಟ್ರೋ ರೈಲು ಆರಂಭ, ಶಾಲಾ- ಕಾಲೇಜುಗಳು ಮುಚ್ಚಿರುತ್ತೆ…!

Pinterest LinkedIn Tumblr


ನವದೆಹಲಿ: ಸೆಪ್ಟಂಬರ್​ 1ರಿಂದ ಜಾರಿಗೆ ಬರಲಿರುವ ನಾಲ್ಕನೇ ಹಂತದ ನಿರ್ಬಂಧ ಸಡಿಲಿಕೆ (ಅನ್​ಲಾಕ್​ 4.0) ವೇಳೆ ಮೆಟ್ರೋ ಸಂಚಾರ ಬಹುತೇಕ ಆರಂಭವಾಗಲಿದೆ. ಆದರೆ, ಶಾಲಾ-ಕಾಲೇಜುಗಳು ಮುಚ್ಚಿರಲಿವೆ.

ಕೇಂದ್ರ ಗೃಹ ಇಲಾಖೆ ಅನ್​ಲಾಕ್​ 4.0 ಮಾರ್ಗಸೂಚಿಗಳನ್ನು ಸಿದ್ಧಪಡಿಸಿದ್ದು, ದೇಶಾದ್ಯಂತ ಮೆಟ್ರೋ ರೈಲುಗಳ ಸಂಚಾರಕ್ಕೆ ಅವಕಾಶ ನೀಡುವ ಸಾಧ್ಯತೆ ಇದೆ ಎಂದು ಇಲಾಖೆ ಅಧಿಕಾರಿಗಳ ಮೂಲದಿಂದ ತಿಳಿದು ಬಂದಿದೆ.

ಕರೊನಾ ಸಂಕಷ್ಟವನ್ನು ನಿಗ್ರಹಿಸಲು ದೇಶಾದ್ಯಂತ ವಿಧಿಸಲಾಗಿದ್ದ ನಿರ್ಬಂಧಗಳನ್ನು ಹಂತಹಂತವಾಗಿ ತೆರವು ಮಾಡಲಾಗುತ್ತಿದೆ. ನಾಲ್ಕನೇ ಹಂತದ ಲಾಕ್​ಡೌನ್​ ತೆರವು ವೇಳೆ ಇನ್ನಷ್ಟು ವಿನಾಯ್ತಿ ನೀಡಲಾಗುತ್ತಿದೆ.

ಸೆಪ್ಟಂಬರ್​ ಒಂದರಿಂದ ಮೆಟ್ರೋ ರೈಲು ಸಂಚಾರಕ್ಕೆ ಚಾಲನೆ ದೊರೆಯಲಿದೆ. ಆದರೆ, ತಕ್ಷಣಕ್ಕೆ ಶಾಲಾ-ಕಾಲೇಜು, ಶಿಕ್ಷಣ ಸಂಸ್ಥೆಗಳ ಆರಂಭ ದೂರದ ಮಾತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಂತಹಂತವಾಗಿ ಮೆಟ್ರೋ ರೈಲು ಸಂಚಾರಕ್ಕೆ ಅನುಮತಿ ನೀಡುವಂತೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​ ನಿನ್ನೆಯಷ್ಟೇ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು.
ಸದ್ಯ ಹೋಟೆಲ್​ ಹಾಗೂ ರೆಸ್ಟೋರಂಟ್​ಗಳನ್ನು ತೆರೆಯಲು ಈಗಾಗಲೇ ಅನುಮತಿ ನೀಡಲಾಗಿದೆ. ಮುಂದಿನ ಹಂತದಲ್ಲಿ ಮದ್ಯ ಪೂರೈಕೆಗೂ ಅವಕಾಶ ದೊರೆಯಬಹುದು. ಆದರೆ, ಸಾರ್ವಜನಿಕ ಸಭೆ- ಸಮಾರಂಭಗಳ ಮೇಲೆ ವಿಧಿಸಲಾಗಿರುವ ನಿರ್ಬಂಧ ಮುಂದುವರಿಯಲಿದೆ.

ಕೇಂದ್ರ ಸರ್ಕಾರ ಮತ್ತಷ್ಟು ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡುವ ನಿರೀಕ್ಷೆ ಇದ್ದು, ಜನ ಹಾಗೂ ವಾಹನಗಳ ಸಂಚಾರದ ಮೇಲೆ ನಿರ್ಬಂಧ ವಿಧಿಸದಂತೆ ಈಗಾಗಲೇ ರಾಜ್ಯಗಳಿಗೆ ಸೂಚಿಸಿದೆ.

Comments are closed.