
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಧನರಾಗಿ ಎರಡೂವರೆ ತಿಂಗಳಾಗಿವೆ. ಜೂನ್ ತಿಂಗಳಲ್ಲಿ ಅವರು ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇಷ್ಟು ದಿನಗಳಲ್ಲಿ ಅವರ ಸಾವಿಗೆ ಕಾರಣವೇನು ಮತ್ತು ಕಾರಣ ಯಾರು ಎಂಬ ಚರ್ಚೆ ಜೋರಾಗಿ ನಡೆಯುತ್ತಲೇ ಇದೆ. ಈಗ ಸಿಬಿಐ ಸಹ ಈ ವಿಷಯನ್ನು ತನಿಖೆ ನಡೆಸುತ್ತಿದೆ.
ಈಗ ಖ್ಯಾತ ಲೇಖಕ ಚೇತನ್ ಭಗತ್ ಅವರು ಸುಶಾಂತ್ ಸಾವಿಗೆ ಕಾರಣವೇನು ಎಂದು ಹೇಳಿದ್ದಾರೆ. ಚೇತನ್ ಭಗತ್ ಅವರ ‘ಥ್ರೀ ಮಿಸ್ಟೇಕ್ಸ್ ಆಫ್ ಮೈ ಲೈಫ್’ ಕಾದಂಬರಿಯನ್ನಾಧರಿಸಿ ‘ಕಾಯ್ ಪೋ ಚೇ’ ಚಿತ್ರವನ್ನು ಮಾಡಲಾಗಿತ್ತು. ಅಲ್ಲಿಂದ ಸುಶಾಂತ್ ಮತ್ತು ಚೇತನ್ ಭಗತ್ ನಡುವೆ ಒಳ್ಳೆಯ ಗೆಳತನವಿತ್ತು.
ಅಷ್ಟೇ ಅಲ್ಲ, ಸುಶಾಂತ್ ಅವರ ಕೊನೆಯ ಚಿತ್ರ ‘ದಿಲ್ ಬೇಚಾರಾ’ ಓಟಿಟಿಯೊಂದರಲ್ಲಿ ಬಿಡುಗಡೆಯಾದಾಗ, ಆ ಚಿತ್ರದ ಬಗ್ಗೆ ಕೆಟ್ಟದಾಗಿ ಬರೆದು ಸುಶಾಂತ್ಗೆ ಮತ್ತೊಮ್ಮೆ ನೋವು ಮಾಡಬೇಡಿ ಎಂದು ಮನವಿ ಮಾಡಿದ್ದರು. ಜತೆಗೆ ಬಾಲಿವುಡ್ ಮಾಫಿಯಾ, ಹೊರಗಿನವರನ್ನು ಹೇಗೆ ತುಳಿಯುತ್ತದೆ ಎಂದು ಹೇಳುವುದರ ಜತೆಗೆ, ತಮಗೆ ಏನೆಲ್ಲಾ ಆಯಿತು ಎಂಬುದನ್ನು ಅವರು ವಿವರಿಸಿದ್ದರು.
ಈಗ ಚೇತನ್ ಭಗತ್, ಮತ್ತೊಮ್ಮೆ ಸುಶಾಂತ್ ಸಾವಿನ ಬಗ್ಗೆ ಮಾತನಾಡಿದ್ದಾರೆ. ಈ ಬಾರಿ ಅವರು, ಸುಶಾಂತ್ ಸಾವಿಗೆ ಕಾರಣವೇನು ಎಂಬುದನ್ನು ಸಹ ಬಹಿರಂಗಪಡಿಸಿದ್ದಾರೆ. ಅವರ ಪ್ರಕಾರ, ಕಾರಣವೇನು ಗೊತ್ತಾ? ಮಾಧ್ಯಮ ವರದಿಗಳು.
ಸುಶಾಂತ್ ಬಗ್ಗೆ ಕೆಲವು ಕಡೆ ನೆಗೆಟಿವ್ ಆದಂತಹ ವರದಿಗಳು ಪ್ರಕಟಗೊಂಡಿದ್ದವು ಮತ್ತು ಅವನ್ನೆಲ್ಲಾ ಜೋಡಿ ಸುಶಾಂತ್ ಬಹಳ ನೊಂದಿದ್ದರು ಎಂಬುದು ಗೊತ್ತಿರುವ ವಿಷಯವೇ. ಈಗ ಚೇತನ್ ಸಹ ಅದನ್ನೇ ಹೇಳಿದ್ದಾರೆ.
‘ಕೆಲವರು ಅದ್ಯಾಕೋ ಸುಶಾಂತ್ ಅವರನ್ನು ಟಾರ್ಗೆಟ್ ಮಾಡಿದ್ದರು. ಪದೇಪದೇ ಅವರ ಬಗ್ಗೆ ನೆಗೆಟಿವ್ ಆದಂತಹ ವರದಿಗಳನ್ನು ಬರೆಯುತ್ತಿದ್ದರು. ಇದನ್ನು ನೋಡಿ ಅವರಿಗೆ ಬಹಳ ನೋವಾಗಿತ್ತು. ಇನ್ನು ‘ಚಿಚ್ಚೋರೇ’ ಚಿತ್ರದ ಯಶಸ್ಸಿನಲ್ಲಿ ತಮಗೆ ಕ್ರೆಡಿಟ್ ಸಿಗಲಿಲ್ಲ ಎಂಬ ಬೇಸರ ಅವರಲ್ಲಿ ಬಹಳ ಇತ್ತು. ಈ ಬಗ್ಗೆ ನಿರ್ದೇಶಕ ಅಭಿಷೇಕ್ ಕಪೂರ್ ಅವರಲ್ಲಿ ದುಃಖ ತೋಡಿಕೊಂಡಿದ್ದರು’ ಎಂದು ಚೇತನ್ ಭಗತ್ ಹೇಳಿಕೊಂಡಿದ್ದಾರೆ.
Comments are closed.