ಕರ್ನಾಟಕ

ರಾಜ್ಯದಲ್ಲಿ ಇಂದು (ರವಿವಾರ) 5,938 ಕೊರೋನಾ ಪ್ರಕರಣಗಳು ಪತ್ತೆ: 68 ಮಂದಿ ಬಲಿ

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 5,938 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು ಕಳೆದ 24 ಗಂಟೆಯಲ್ಲಿ ದಾಖಲೆಯ 68 ಮಂದಿ ಬಲಿಯಾಗಿದ್ದಾರೆ.

ಕಳೆದ 24 ಗಂಟೆಯಲ್ಲಿ 5,938 ಹೊಸ ಪ್ರಕರಣ ಪತ್ತೆಯಾಗಿದ್ದು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2,77,814ಕ್ಕೆ ಏರಿಕೆಯಾಗಿದೆ.

ಕೋವಿಡ್-19 ಸೋಂಕಿನಿಂದ ಇಂದು ದಾಖಲೆಯ 68 ಮಂದಿ ಬಲಿಯಾಗಿದ್ದು ರಾಜ್ಯದಲ್ಲಿ ಮೃತರ ಸಂಖ್ಯೆ 4,683ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಇಂದು 4,996 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟಾರೆ 2,77,814 ಪ್ರಕರಣಗಳ ಪೈಕಿ 1,89,564 ಮಂದಿ ಚೇತರಿಸಿಕೊಂಡಿದ್ದಾರೆ. ಇನ್ನು 83,551 ಸಕ್ರಿಯ ಪ್ರಕರಣಗಳಿದ್ದು ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿಂದು 2,126 ಪ್ರಕರಣ ಪತ್ತೆಯಾಗಿದ್ದು 5 ಮಂದಿ ಬಲಿಯಾಗಿದ್ದಾರೆ. ಈ ಮೂಲಕ ನಗರದಲ್ಲಿ ಸಾವಿನ ಸಂಖ್ಯೆ 1,668ಕ್ಕೆ ಏರಿಕೆಯಾಗಿದೆ. ಇಂದು ಒಂದೇ ದಿನ 1,468 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟಾರೆ 1,07,875 ಮಂದಿ ಸೋಂಕಿಗೆ ತುತ್ತಾಗಿದ್ದು 71,329 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.

ಇನ್ನುಳಿದಂತೆ ಬಳ್ಳಾರಿ 406, ಬೆಳಗಾವಿ 136, ದಾವಣಗೆರೆ 265, ಕೊಪ್ಪಳ 256, ಶಿವಮೊಗ್ಗ 246, ಕಲಬುರಗಿ 203, ವಿಜಯಪುರ 134, ಹಾಸನ 196, ಧಾರವಾಡ 194, ಉಡುಪಿ 117, ದಕ್ಷಿಣ ಕನ್ನಡ 193, ಗದಗ 182, ಹಾವೇರಿ 150, ಬಾಗಲಕೋಟೆ 139, ತುಮಕೂರು 112, ಚಿಕ್ಕಮಗಳೂರು 126, ಮೈಸೂರು 92, ರಾಯಚೂರು 81, ಚಿತ್ರದುರ್ಗ 71, ಉತ್ತರ ಕನ್ನಡ 108 ಪ್ರಕರಣ ಪತ್ತೆಯಾಗಿದೆ.

Comments are closed.