ಅಂತರಾಷ್ಟ್ರೀಯ

ಟಾಕೀಸ್ ನಲ್ಲಿ ಸೆಕ್ಸ್​ ಮಾಡಿ ಸಿಕ್ಕಿಬಿದ್ದ ಜೋಡಿ

Pinterest LinkedIn Tumblr


ಲಂಡನ್​: ಕರೊನಾ ವೈರಸ್​ ಲಾಕ್​ಡೌನ್​ ಮುಗಿದ ಬೆನ್ನಲ್ಲೇ ಹೊಸದಾಗಿ ತೆರೆಯಲಾದ ಸಿನಿಮಾ ಮಂದಿರದ ಮುಂದಿನ ಸಾಲಿನಲ್ಲೇ ಜೋಡಿಯೊಂದು ಸೆಕ್ಸ್​ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ​ ಸೆರೆಯಾಗಿದ್ದು, ವಿಡಿಯೋ ವೈರಲ್​ ಆಗಿದೆ.

ಈ ಘಟನೆ ಯುನೈಟೆಡ್​ ಕಿಂಗ್​ಡಮ್​ನಲ್ಲಿ ನಡೆದಿದೆ ಎನ್ನಲಾಗಿದೆ. ಆದರೆ, ಸ್ಥಳದ ಬಗ್ಗೆ ಖಚಿತ ಮಾಹಿತಿ ಇಲ್ಲ. ಟ್ವಿಟರ್​ನಲ್ಲಿ ಅಶ್ಲೀಲ ವಿಡಿಯೋ ಶೇರ್​ ಆಗಿದ್ದು, ಸಾಕಷ್ಟು ರೀಟ್ವೀಟ್​ಗಳೊಂದಿಗೆ ಮೂರು ಮಿಲಿಯನ್​ಗೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ.

ಚಿತ್ರಮಂದಿರ ಖಾಲಿ ಇರುವುದನ್ನೇ ಬಂಡವಾಳ ಮಾಡಿಕೊಂಡು ಜೋಡಿ ಸಂಭೋಗ ನಡೆಸಿದೆ. ಆದರೆ, ಥಿಯೇಟರ್​ನಲ್ಲಿದ್ದ ಹೈಟೆಕ್​ ಇಫ್ರಾ ರೆಡ್​ ಸಿಸಿಟಿವಿ ಸಿಸ್ಟಮ್​ನಲ್ಲಿ ತಮ್ಮ ಕಾಮಕ್ರೀಡೆ ರೆಕಾರ್ಡ್​ ಆಗುತ್ತಿದೆ ಎಂಬುದರ ಅರಿವು ಸಹ ಜೋಡಿಗೆ ಇರಲಿಲ್ಲ. ಯಾರು ಇಲ್ಲವೆಂದುಕೊಂಡು ಸೆಕ್ಸ್​ ಮಾಡಿದ್ದಾರೆ. ಆದರೆ, ಸಿಸಿಟಿವಿಯಿಂದಾಗಿ ಇದೀಗ ಅಶ್ಲೀಲ ವಿಡಿಯೋ ಯುಕೆ ಜಾಲತಾಣದಲ್ಲಿ ಹರಿದಾಡಿದೆ.

ವಿಡಿಯೋ ಕುರಿತು ನೆಟ್ಟಿಗರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಯಾರು ಹೀಗೆ ಮಾಡಿದ್ದು, ಸಿಕ್ಕಿಬೀಳುತ್ತೇವೆ ಎಂಬ ಆಲೋಚನೆಯು ಬರಲಿಲ್ಲವೇ ನಿಮಗೆ ಎಂದು ನೆಟ್ಟಿರೊಬ್ಬರು ಕಿಡಿಕಾರಿದ್ದಾರೆ. ಸಿನಿಮಾ ಮಂದಿರಗಳಲ್ಲಿ ಇದು ಸಾಮಾನ್ಯ ಆಗಿಬಿಟ್ಟಿದೆ. ಚಿತ್ರಮಂದಿರಗಳಲ್ಲಿ ಕೆಲಸ ಮಾಡುವವರು ಪ್ರತಿದಿನ ತುಂಬಾ ಸ್ವಚ್ಛಗೊಳಿಸಬೇಕೆಂದು ವ್ಯಂಗ್ಯವಾಡಿದ್ದಾರೆ. ವಿಡಿಯೋ ಕುರಿತು ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

Comments are closed.