ಭಾರತ ಕಂಡ ಯಶಸ್ವಿ ನಾಯಕನ ಮೌನ ವಿದಾಯಕ್ಕೆ ಕ್ರಿಕೇಟ್ ಪ್ರೇಮಿಗಳು, ಸಿನಿಮಾ ಸ್ಟಾರ್‌ಗಳು ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡುತ್ತಿರುವ ಬೆನ್ನಲ್ಲೇ, ಕ್ರಿಕೆಟ್ ಲೆಜೆಂಡ್ ವಿದಾಯಕ್ಕೆ ಪ್ರಧಾನಿ ನರೇಂದ್ರ ಮೋದಿ ಕೂಡ ಧೋನಿಗೆ ಪತ್ರ ಬರೆದಿದ್ದಾರೆ.
“ನಿಮ್ಮ ಹೆಜ್ಜೆಗುರುತುಗಳು ದಿಟ್ಟವೂ, ಧೈರ್ಯದಿಂದಲೂ ಕೂಡಿದೆ,ನೀವು ಇಡೀ ರಾಷ್ಟ್ರಮಟ್ಟದಲ್ಲಿ ಚರ್ಚೆಯ ಕೇಂದ್ರವಾಗಲು ನೀವು ಹಂಚಿಕೊಂಡ ಆ ವಿಡಿಯೋ ಸಾಕು, . 130 ಕೋಟಿ ಭಾರತೀಯರು ನಿಮ್ಮ ನಿವೃತ್ತಿ ಸುದ್ದಿಯಿಂದ ನಿರಾಶೆಗೊಂಡರು. ಆದರೆ ಭಾರತೀಯ ಕ್ರಿಕೆಟ್‌ಗಾಗಿ ನೀವು ಮಾಡಿದ ಎಲ್ಲಾ ಕೆಲಸಗಳಿಗೆ ನಾವೆಲ್ಲರೂ ಎಂದೆಂದಿಗೂ ಕೃತಜ್ಞರಾಗಿರಬೇಕು” ಎಂದು ಪ್ರಧಾನಿ ತಮ್ಮ ಪತ್ರದಲ್ಲಿ ಬರೆದಿದ್ದಾರೆ.
ಭಾರತಕ್ಕಾಗಿ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದು ತಂದ ಹೆಮ್ಮೆಯ ನಾಯಕ ಎಂಎಸ್ ಧೋನಿ, ಅಂತಾರಾಷ್ಟ್ರೀಯ ಕ್ರಿಕೇಟ್‍ಗೆ ಶನಿವಾರ ( ಆಗಸ್ಟ್ 15 ) ಸಂಜೆ ಸೋಷಿಯಲ್ ಮೀಡಿಯಾದ ಮೂಲಕ ನಿವೃತ್ತಿ ಘೋಷಣೆ ಮಾಡಿದ್ರು.
ಸೋಶಿಯಲ್ ವೆಬ್ಸೈಟ್ ಮೂಲಕ ತಮ್ಮ ವಿದಾಯದ ಸುದ್ದಿ ತಿಳಿಸಿದ ಮಾಹಿ ಇಷ್ಟು ದಿನಗಳ ಕಾಲ ಅಭಿಮಾನಿಗಳು ನೀಡಿದ ಪ್ರೀತಿಗೆ ನಾನು ಚಿರರುಣಿ ಅಂದಿದ್ದಾರೆ. ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ ನಲ್ಲಿ ವಿಡಿಯೋ ಒಂದನ್ನು ಹಾಕಿರುವ ಕೂಲ್ ಕ್ಯಾಪ್ಟನ್ ಭಾವನಾತ್ಮಕವಾಗಿ ತಮ್ಮ ಜೀವನದ ಘಳಿಗೆಗಳನ್ನು ಮೆಲುಕು ಹಾಕಿದ್ದಾರೆ.
Comments are closed.