ಕುಂದಾಪುರ: ಭಾನುವಾರ ಬೈಂದೂರು ತಾಲೂಕಿನ ಕೊಡೆರಿಯಲ್ಲಿ ನಡೆದ ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ನಾಲ್ವರ ಪೈಕಿ ಈವರೆಗೆ ಮೂವರ ಶವ ಪತ್ತೆಯಾಗಿದೆ.

(ಮೃತ ನಾಗ ಖಾರ್ವಿ, ಶೇಖರ್ ಖಾರ್ವಿ, ಲಕ್ಷ್ಮಣ ಖಾರ್ವಿ)

ಭಾನುವಾರ ಮಧ್ಯಾಹ್ನ ಘಟನೆ ನಡೆದ ತಕ್ಷಣವೇ ನಾಪತ್ತೆಯಾದ ಮೀನುಗಾರರ ಹುಡುಕಾಟದಲ್ಲಿ ಸ್ಥಳೀಯ ಮೀನುಗಾರರು, ಕರಾವಳಿ ಕಾವಲು ಪಡೆ ಪೊಲೀಸರು ಬಹಳಷ್ಟು ಶ್ರಮಿಸಿದ್ದರು. ಸೋಮವಾರ ಬೆಳಿಗ್ಗೆ ಕಿರಿಮಂಜೇಶ್ವರ ಹೊಸಹಿತ್ಲು ಬಳಿ ಕಡಲಕಿನಾರೆಯಲ್ಲಿ ಮೀನುಗಾರ ನಾಗ ಎನ್ನುವರ ಮೃತದೇಹ ಪತ್ತೆಯಾಗಿತ್ತು. ಸೋಮವಾರ ಮಧ್ಯಾಹ್ನದ ಬಳಿಕ ಮಂಗಳೂರಿನಿಂದ ಕೋಸ್ಟ್ ಗಾರ್ಡ್ ಬೋಟ್ ಆಗಮಿಸಿ ನಾಪತ್ತೆಯಾದವರ ಹುಡುಕಾಟದಲ್ಲಿ ತೊಡಗಿಸಿಕೊಂಡಿದ್ದರು. ಸೋಮವಾರ ರಾತ್ರಿ ವೇಳೆ ಎರಡು ಶವಗಳು ಸಿಕ್ಕಿರುವ ಮಾಹಿತಿ ಲಭ್ಯವಾಗಿದ್ದು ಶೇಖರ್ ಖಾರ್ವಿ ಹಾಗೂ ಲಕ್ಷ್ಮಣ ಖಾರ್ವಿ ಅವರ ಮೃತದೇಹ ಎನ್ನಲಾಗಿದೆ.
ಇನ್ನು ನಾಪತ್ತೆಯಾದ ನಾಲ್ವರ ಪೈಕಿ ಮೂವರು ಶವವಾಗಿ ಪತ್ತೆಯಾದರೆ ಮಂಜುನಾಥ್ ಖಾರ್ವಿಗಾಗಿ ಹುಡುಕಾಟ ಮುಂದುವರಿಯಲಿದೆ.
Comments are closed.