ಕುಂದಾಪುರ: ಭಾನುವಾರ ಕೊಡೇರಿಯಲ್ಲಿ ನಡೆದ ದೋಣಿ ದುರಂತದಲ್ಲಿ ನಾಲ್ಕು ಮಂದಿ ನಾಪತ್ತೆಯಾಗಿದ್ದು ಅದರಲ್ಲಿ ಓರ್ವರ ಮೃತದೇಹ ಸೋಮವಾರ ಬೆಳಿಗ್ಗೆ ಪತ್ತೆಯಾಗಿದೆ.
ಮೃತ ವ್ಯಕ್ತಿಯನ್ನು ನಾಗ ಖಾರ್ವಿ(55) ಎಂದು ಗುರುತಿಸಲಾಗಿದೆ, ಸೋಮವಾರ ಮುಂಜಾನೆ ಕಿರಿಮಂಜೇಶ್ವರದ ಹೊಸ ಹಿತ್ಲು ಸಮೀಪ ಶವ ಪತ್ತೆಯಾಗಿದ್ದು ಇನ್ನುಳಿದ ಮೂವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.


ಭಾನುವಾರ ಕೊಡೇರಿಯ ಸಮುದ್ರ ತೀರದಲ್ಲಿ ಮೀನುಗಾರಿಕೆಗೆ ತೆರಳುತ್ತಿದ್ದ ಸಾಗರಶ್ರೀ ಹೆಸರಿನ ನಾಡದೋಣಿ ಭಾನುವಾರ ಮಧ್ಯಾಹ್ನ ಬ್ರೇಕ್ ವಾಟರ್ ಗೆ ಢಿಕ್ಕಿ ಹೊಡೆದಿದ್ದು ಪರಿಣಾಮ ಹನ್ನೆರಡು ಮಂದಿ ಸಮುದ್ರಕ್ಕೆ ಬಿದಿದ್ದು ಅದರಲ್ಲಿ ಎಂಟು ಮಂದಿಯನ್ನು ರಕ್ಷಣೆ ಮಾಡಲಾಗಿತ್ತು ಉಳಿದ ನಾಲ್ಕು ಮಂದಿ ಉಪ್ಪುಂದ ಕರ್ಕಿಕಳಿ ನಿವಾಸಿಗಳಾದ ಬಿ. ನಾಗ (46) ಲಕ್ಷ್ಮಣ (34) ಮಂಜುನಾಥ (38) ಹಾಗೂ ಇನ್ನೋರ್ವ ಉಪ್ಪುಂದ ಕರ್ಕಿಕಳಿ ಫಿಶರೀಸ್ ಕಾಲೋನಿಯ ಗಂಜೇರಿ ನಿವಾಸಿ ಶೇಖರ ( 35 ) ನಾಪತ್ತೆಯಾಗಿದ್ದರು ಸೋಮವಾರ ಬೆಳಿಗ್ಗೆ ನಾಗ ಖಾರ್ವಿ ಅವರ ಮೃತದೇಹ ಪತ್ತೆಯಾಗಿದೆ ಉಳಿದ ಮೂವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಕರಾವಳಿ ಕಾವಲು ಪಡೆಯ ಇನ್ಸ್‌ಪೆಕ್ಟರ್ ಸಂದೀಪ್ ಹಾಗೂ ಸಿಬ್ಬಂದಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
ತೀರದಲ್ಲಿ ಸಾವಿರಾರು ಜನರು..
ಘಟನೆ ನಡೆದ ಸಮಯದಿಂದ ಕಾಣೆಯಾದ ಮೀನುಗಾರರಿಗೆ ಶೋಧ ಕಾರ್ಯದಲ್ಲಿ ಸ್ಥಳೀಯ ಮೀನುಗಾರರು ಸೇರಿದಂತೆ ಶೋಧ ಕಾರ್ಯ ವೀಕ್ಷಿಸಲು ಸಾವಿರಾರು ಮಂದಿ ಕೊಡೇರಿ ಸಮುದ್ರದ ಬಂದರು ಪ್ರದೇಶಲ್ಲಿ ನೆರೆದಿದ್ದಾರೆ.
(ವರದಿ- ಯೋಗೀಶ್ ಕುಂಭಾಸಿ)
Comments are closed.