ಕರಾವಳಿ

ಎಸ್‌ಎಸ್‌ಎಲ್‌ಸಿ ಟಾಪಾರ್ ಅನುಷ್ ಅವರಿಗೆ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದಿಂದ ಸನ್ಮಾನ

Pinterest LinkedIn Tumblr

ಮಂಗಳೂರು : ಎಸ್‌ಎಸ್‌ಎಲ್‌ಸಿ ಟಾಪಾರ್ ಅನುಷ್ ಎಣ್ಣೆ ಮಜಲು ಇವರಿಗೆ ಮಂಗಳೂರು ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದಿಂದ ಸನ್ಮಾನ ಮಾಡಿ ಗೌರವಿಸಲಾಯಿತು.

ಮಂಗಳೂರು ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಕಛೇರಿಯಲ್ಲಿ ಸಂಘದ ಅಧ್ಯಕ್ಷರಾದ ಡಾ.ದಾಮೋದರ ನಾರಾಲ್ ರವರ ಅಧ್ಯಕ್ಷತೆಯಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625/625ಅಂಕ ಗಳಿಸಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಅನುಷ್ ಅವರನ್ನು ಶಾಲು ಹೊದೆಸಿ ಗೌರವಿಸಲಾಯಿತು.

ಸಂಘದ ಹಿರಿಯ ನಿರ್ದೇಶಕರಾದ ಶ್ರೀ ಲೋಕಯ್ಯ ಗೌಡ .ಕೆ ಇವರು ಸನ್ಮಾನಿತರಿಗೆ ಹಿತವಚನ ಹಾಗೂ ಮುಂದಿನ ಭವಿಷ್ಯಕ್ಕೆ ಸಲಹೆ ಸೂಚನೆಗಳನ್ನು ನೀಡಿ ಹರಸಿದರು.

ಸಂಘದ ಪದಾಧಿಕಾರಿಗಳಾದ ಶ್ರೀ ರಾಮಣ್ಣ ಗೌಡ ಕೊಂಡೆಬಾಯಿ , ಶ್ರೀ ಪುಂಡರೀಕ ಅರಂಬೂರು. , ಶ್ರೀ ಲಿಂಗಯ್ಯ ಯು.ಯಸ್ , ಶ್ರೀ ಮತಿ ಪೂರ್ಣಿಮಾ ಕೆ .ಯಂ, ಶ್ರೀ ಸುಕುಮಾರ್ ಯು.ಬಿ.ಯಸ್ ಶ್ರೀ ಸದಾನಂದ ಗೌಡ ಡಿ ಪಿ . ಶ್ರೀ ಗುರುದೇವ್ ಯು.ಬಿ ಮತ್ತು ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಸೌಮ್ಯ ಸುಕುಮಾರ್ , ಕಾರ್ಯದರ್ಶಿ ಶ್ರೀ ಮತಿ ಸವಿತಾ ಡಿ ಕೆ , ಯುವ ಘಟಕದ ಅಧ್ಯಕ್ಷ ಶ್ರೀ ಕಿರಣ್ ಬುಡ್ಲೆಗುತ್ತು , ಕಾರ್ಯದರ್ಶಿ ಶ್ರೀ ರಾಘವೇಂದ್ರ ಮತ್ತು ಇತರ ಪದಾಧಿಕಾರಿಗಳು ಉಪಸ್ಥಿತರಿದ್ದು ಶುಭ ಹಾರೈಸಿದರು.

ಸಂಘದ ಕಾರ್ಯದರ್ಶಿ ಶ್ರೀ ರಾಮಣ್ಣ ಗೌಡ ಕೊಂಡೆಬಾಯಿ ಕಾರ್ಯಕ್ರಮ ನಿರೂಪಿಸಿದರು . ಜತೆ ಕಾರ್ಯದರ್ಶಿ ಶ್ರೀ ಲಿಂಗಯ್ಯ ಯು. ಯಸ್ ವಂದಿಸಿದರು.

Comments are closed.