
ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಷಾ ಕೋವಿಡ್ ಸೋಂಕಿನ ಗುಣಲಕ್ಷಣಗಳು ಕಂಡುಬಂದ ಕಾರಣ ಅವರು ಟೆಸ್ಟ್ ಮಾಡಿಸಿಕೊಂಡು ಕ್ವಾರಂಟೈನ್ಗೆ ಹೋಗಿದ್ದು. ಶುಕ್ರವಾರ ಕೋವಿಡ್ 19 ಟೆಸ್ಟ್ನ ಫಲಿತಾಂಶ ಬಂದಿದ್ದು, ಇನ್ನೂ ಕೆಲವು ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇರುವುದಾಗಿ ಅವರು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.
ಟ್ವೀಟ್ ಮೂಲಕ ಷಾ ಹೇಳಿರುವುದಿಷ್ಟು- ನಾನು ಇಂದು ಮನೆಯಲ್ಲಿದ್ದೇನೆ. ಕೋವಿಡ್ 19 ಟೆಸ್ಟ್ ನೆಗೆಟಿವ್ ಬಂದಿದೆ. ದೇವರಿಗೆ ನಾನು ಕೃತಜ್ಞನಾಗಿದ್ದೇನೆ. ನನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ, ಹಾರೈಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ಡಾಕ್ಟರ್ ಸಲಹೆ ಪ್ರಕಾರ ಇನ್ನೂ ಕೆಲವು ದಿನಗಳ ಕಾಲ ಹೋಮ್ ಐಸೋಲೇಷನ್ಗೆ ಒಳಗಾಗಲಿದ್ದೇನೆ.
ಮೆದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದ ಎಲ್ಲ ಡಾಕ್ಟರ್ಸ್ ಮತ್ತು ಅರೆವೈದ್ಯಕೀಯ ಸಿಬ್ಬಂದಿಗೆ ಮತ್ತು ನೆರವು ನೀಡಿದವರಿಗೆ ಎಲ್ಲರಿಗೂ ಧನ್ಯವಾದಗಳನ್ನೂ ಅಮಿತ್ ಷಾ ಟ್ವೀಟ್ ಮೂಲಕ ಪ್ರಕಟಿಸಿದ್ದಾರೆ.
Comments are closed.