
ಕರೋನಾ ಹೆಸರಲ್ಲಿ ನಡೆದಿರುವ 2 ಸಾವಿರ ಕೋಟಿ ಹಗರಣವನ್ನು ಉಚ್ಚನ್ಯಾಯಾಲಯದ ನ್ಯಾಯಾಧೀಶರಿಂದ ತನಿಖೆ ನಡೆಸುವಂತೆ ಕಾಂಗ್ರೆಸ್ ನ ಮಾಜಿ ಡಿಸಿಎಂ ಜಿ.ಪರಮೇಶ್ವರ ಆಗ್ರಹಿಸಿದರು.
ಕೋವಿಡ್ -19 ಹೆಸರಲ್ಲಿ ರಾಜ್ಯ ಸರ್ಕಾರ ಲೂಟಿ ನಡೆಸಿರುವುದನ್ನು ಇಡೀ ರಾಜ್ಯದ ಜನತೆಗೆ ತಿಳಿಸಲು ಕಾಂಗ್ರೆಸ್ ನಿರ್ಧಾರಿಸಿದೆ.
ಸಾಮಾನ್ಯ ಜನರಿಗೂ ಬಿಜೆಪಿ ಕೋವಿಡ್-19 ಹೆಸರಲ್ಲಿ ಸರ್ಕಾರ ನಡೆಸಿರುವ ಅಕ್ರಮ ಗೊತ್ತಾಗಬೇಕಾಗಿದೆ ಎಂದು ಕೋಲಾರದಲ್ಲಿ ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಹೇಳಿದರು. ಕೋಲಾರದ ಪತ್ರಕರ್ತರ ಭವನದಲ್ಲಿ ಜಿಲ್ಲೆಯ ಶಾಸಕರ ಜೊತೆ ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಡಿಸಿಎಂ ಜಿ.ಪರಮೇಶ್ವರ್ ಕೋವಿಡ್-19 ಹೆಸರಲ್ಲಿ 2 ಸಾವಿರ ಕೋಟಿ ಭ್ರಷ್ಟಾಚಾರವನ್ನು ಸಿಎಂ ಯಡಿಯೂರಪ್ಪ ಉಚ್ಚನ್ಯಾಯಾಲಯದ ನ್ಯಾಯಾಧೀಶರಿಂದ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಕರೋನಾ ನಿಯಂತ್ರಣ ಕುರಿತು ಕಾಂಗ್ರೆಸ್ ನೀಡಿದ ಸಲಹೆಗಳನ್ನು ಸರ್ಕಾರ ಗಣನೆಗೆ ತೆಗೆದುಕೊಳ್ಳಲಿಲ್ಲ. ವಿದೇಶಿದಿಂದ ಬಂದ ಜನರನ್ನು ಸರಿಯಾಗಿ ಕ್ವಾರಂಟೈನ್ ನಲ್ಲಿ ಇಡದೇ ನಿರ್ಲಕ್ಷ್ಯವಹಿಸುತ್ತು. ಕರೋನಾ ನಿಯಂತ್ರಣದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸಿಎಂ ಯಡಿಯೂರಪ್ಪ, ವೈದ್ಯಕೀಯ ಸಚಿವರು, ಆರೋಗ್ಯ ಸಚಿವರು ಸೇರಿದಂತೆ ಸರ್ಕಾರದ ಎಲ್ಲಾ ಸಚಿವರು ಕರೋನಾ ನಿಯಂತ್ರಣ ಮಾಡಲು ವಿಫಲರಾಗಿದ್ದಾರೆಂದು ಸರ್ಕಾರದ ವಿರುದ್ಧ ಕಿಡಿಕಾರಿದ್ರು. ಇನ್ನು ಬೆಂಗಳೂರು ಹಾಟ್ ಸ್ಪಾಟ್ ಆಗಿದ್ರು ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ, ಕರೋನಾ ಸೊಂಕಿತರಿಗೆ ಸರಿಯಾದ ಆಸ್ಪತ್ರೆಗಳು ಸಿಗದೆ ಆಸ್ಪತ್ರೆಯಿಂದ ಆಸ್ಪತ್ರೆಗೆ ತಿರುಗಿ ಚಿಕಿತ್ಸೆ ಸಿಗದೆ ಅನೇಕರು ಸಾವನ್ನಪ್ಪಿದರು. ಜನರು ಬೀದಿಗಳಲ್ಲಿ ಸಾಯುತ್ತಿದ್ರು ಸಚಿವರು ಹೇಳಿಕೆಗಳಲ್ಲಿ ಕಾಲ ಕಳೆದರೂ ಎಂದ್ರು. ಇದುವರೆಗೆ ಸರಿಯಾದ ಲೆಕ್ಕ ಕೊಡದೆ ಜನರನ್ನು ಕತ್ತಲಲ್ಲಿ ಇಟ್ಟಿದೆ ಸರ್ಕಾರ. ವಿರೋಧ ಪಕ್ಷದ ನಾಯಕರು ಲೆಕ್ಕ ಕೇಳಿದರೆ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಅವರ ಇಷ್ಟ ಬಂದಂತೆ ವರ್ತಿಸಿದರು.
2೦೦೦ಕೋಟಿ ಅವ್ಯವಹಾರ ಆಗಿದೆ. ಹಣ ನಿಮ್ಮ ಜೇಬುಗಳಿಗೆ ಹೋಗಿದೆ. ನಿಮಗೆ ಮಾನವೀಯತೆ ಇದಿಯಾ..? ಮನುಷ್ಯತ್ವ ಇದಿಯ ನಿಮಗೆ..?
ಜನರ ಸಾವಿನಲ್ಲಿ ಹಣ ಹೊಡೆಯುತ್ತೀರ? ಇದಕ್ಕಿಂತ ನೀಚ ಕೆಲಸ ಇನ್ನೊಂದಿಲ್ಲ. ಇಂತಹ ಹೇಯ ಕೃತ್ಯ ಇನ್ನೊಂದಿಲ್ಲ ಎಂದ್ರು. ಪಿಪಿಇ ಕಿಟ್ ನಲ್ಲಿಯೂ 330ರೂಪಾಯಿ ಬೆಲೆಯ ಕಿಟ್ ಗಳನ್ನು 2000ರೂಪಾಯಿಗೆ ಖರೀದಿಸಿದ್ದೀರ. ಎಲ್ಲಿ ಹೋಯ್ತು ಈ ದುಡ್ಡೆಲ್ಲ. ಐವತ್ತು ರೂಪಾಯಿಗೂ ಕಡಿಮೆ ಬೆಲೆಯ ಮಾಸ್ಕ್ ಗಳಿಗೆ 150ರೂಪಾಯಿ ಕೊಟ್ಟಿದ್ದಾರೆ. ಯಾರ ದುಡ್ಡು ಇದೆಲ್ ಲ.ಬಡವರ ದುಡ್ಡು ಇದು. ಇದರಲ್ಲಿಯೂ ಹಣ ಹೊಡಿಬೇಕಾ? ಜನರ ಬಗ್ಗೆ ಭಯ ಇಲ್ಲವೇ. ಜನರ ಬಗ್ಗೆ ಗೌರವ ಕೂಡ ಇಲ್ಲ ನಿಮಗೆ.
ಥರ್ಮಲ್ ಎಕ್ಯುಪಮೆಂಟ್ ನ ಬೆಲೆ 2ಸಾವಿರ, ಆದ್ರೆ ಸರ್ಕಾರದ ಆರೋಗ್ಯ ಇಲಾಖೆ 5945 ಹಾಗೂ ಸಮಾಜ ಕಲ್ಯಾಣ ಇಲಾಖೆ ಒಂಬತ್ತು ಸಾವಿರ ರೂಪಾಯಿ ಕೊಟ್ಟು ಖರೀದಿಸಿದ್ದಾರೆ. ಬ್ರಷ್ಟಾಚಾರದಲ್ಲಿಯೂ ಮಂತ್ರಿಗಳಿಗೆ ಕಾಂಪಿಟೇಷನ್ ಮಾಡಿದ್ದಾರೆ. ಇನ್ನೂ ವೆನ್ಟಿಲೇಟರ್ 5.6 ಲಕ್ಷ ದಿಂದ 18.2 ಲಕ್ಷ ತೆಗೆದುಕೊಂಡಿದ್ದಾರೆ, ತಮಿಳುನಾಡಿನಲ್ಲಿ 4 ಲಕ್ಷ ಕೊಟ್ಟು ಖರೀದಿಸಿದ್ದಾರೆ. ಕೇಂದ್ರ ಸರ್ಕಾರ ನಾಲ್ಕು ಲಕ್ಷಕ್ಕೆ ತೆಗೆದುಕೊಳ್ಳತ್ತಾರೆ. ಥರ್ಮಲ್ ಸ್ಕಾನ್ಯರ 2ರಿಂದ 3 ಸಾವಿರ ಮಾರುಕಟ್ಟೆ ಬೆಲೆ ಇದ್ರೆ ಆರೋಗ್ಯ ಇಲಾಖೆ ಥರ್ಮಲ್ ಸ್ಕ್ಯಾನರ್ 5945ರೂ ಕೊಟ್ಟ ಖರೀದಿ ಮಾಡಿದ್ರೆ ಇತ್ತ ಸಮಾಜ ಕಲ್ಯಾಣ ಇಲಾಖೆ 9 ಸಾವಿರ ಕೊಟ್ಟ ಖರೀದಿ ಮಾಡಿದ್ದಾರೆ.
ಹಣ ಲೂಟಿ ಹೊಡೆಯಲು ಸಮಾಜ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಚಿವರು ಪೈಪೋಟಿಗೆ ನಿಂತಿದ್ದಾರೆ. ನೀವು ಸಾಚಗಳಾಗಿದ್ದಾರೆ ಕೊಡಲೇ ಕೋವಿಡ್-19 ಹೆಸರಲ್ಲಿ ನಡೆದಿರುವ ಅವ್ಯವಹಾರವನ್ನು ಉನ್ನತ ನ್ಯಾಯಾಧೀಶರಿಂದ ತನಿಖೆ ನಡೆಸಿ ಎಂದು ಸರ್ಕಾರಕ್ಕೆ ಸವಾಲು ಹಾಕಿದರು. ಇನ್ನೂ ಈ ವೇಳೆ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಶಾಸಕ ಕೆವೈ ನಂಜೇಗೌಡ, ಎಸ್ ಎನ್ ನಾರಾಯಣಸ್ವಾಮಿ, ರೂಪ ಶಶಿಧರ್, ಎಂಎಲ್ಸಿ ನಜೀರ್ ಅಹ್ಮದ್, ರಘು ಆಚಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ ಚಂದ್ರಾರೆಡ್ಡಿ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು.
Comments are closed.