ಮಂಗಳೂರು : ಕೋವಿಡ್-19 ಕಾಯಿಲೆಯ ಪ್ರಯುಕ್ತ ರಾಜ್ಯ ಸರಕಾರದ ವಕ್ಫ್ ಇಲಾಖೆಯ ಸೂಚನೆಯಂತೆ ಮಂಗಳೂರು ಈದ್ಗಾ ಮಸೀದಿಯಲ್ಲಿ ಈ ವರ್ಷ (ಜುಲೈ, 31ರಂದು) ಬಕ್ರೀದ್(ಈದುಲ್ ಅಝ್’ಹಾ) ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇರುವುದಿಲ್ಲ ಎಂದು ಮಂಗಳೂರು ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ ಹಾಗೂ ಈದ್ಗಾ ಮಸೀದಿಯ ಅದ್ಯಕ್ಷರಾದ ಹಾಜೀ ವೈ ಅಬ್ದುಲ್ಲ ಕುಂಞಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಇದೇ ವೇಳೆ ಮಂಗಳೂರು ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯಲ್ಲಿ ಜುಲೈ 31 ರಂದು ಬೆಳಿಗ್ಗೆ 7 ಗಂಟೆಗೆ ಈದುಲ್ ಅಝ್’ಹಾ ನಮಾಝ್ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Comments are closed.