ಕರ್ನಾಟಕ

ಮೈಸೂರಿನಲ್ಲಿ ಮದ್ಯದ ಅಂಗಡಿ ತೆರೆಯುವುದನ್ನು ವಿರೋಧಿಸಿ ನಾಗರಿಕರ ಪ್ರತಿಭಟನೆ

Pinterest LinkedIn Tumblr


ಮೈಸೂರು: ಲಾಕ್‌ ಡೌನ್‌ ಸಡಿಲಿಕೆ ಹಿನ್ನೆಲೆಯಲ್ಲಿ, ಸೋಮವಾರದಿಂದ ರೆಡ್‌ ಝೋನ್‌ ಪ್ರದೇಶಗಳಲ್ಲೂ ಮದ್ಯದಂಗಡಿಗಳನ್ನ ತೆರೆಯಲು ಸರ್ಕಾರ ಅನುಮತಿ ಕೊಡ್ತಿದ್ದಂತೆಯೇ, ಮದ್ಯಪ್ರಿಯರು ಮತ್ತು ಅಂಗಡಿ ಮಾಲೀಕರ ಮೊಗದಲ್ಲಿ ಮಂದಹಾಸ ಮೂಡಿದೆ. ಈ ಮಧ್ಯೆ ಮೈಸೂರಿನಲ್ಲಿ ಮದ್ಯದಂಗಡಿ ತೆರೆಯಲು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಸಿದ್ದಪ್ಪ ವೃತ್ತದ ಬಳಿ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರತಿಭಟನೆ ನಡೆಸಿದ್ದಾರೆ. ಕೊರೊನಾ ತಾಂಡವಾಡುತ್ತಿದ್ದು, ರೆಡ್ ಝೋನ್‌ಲ್ಲಿರೋ ಜಿಲ್ಲೆಯಲ್ಲಿ ಮದ್ಯದಂಗಡಿಗಳನ್ನ ತೆರೆಯಲು ಅವಕಾಶ ಕೊಡಬಾರದು. ಜನರು ಎಲ್ಲಿಂದಲೋ ಬಂದು ಇಲ್ಲಿ ಮದ್ಯ ಖರೀದಿ ಮಾಡುತ್ತಾರೆ. ಕೊರೊನಾ ನಮ್ಮ ಏರಿಯಾಕ್ಕೆ ಬಂದಲ್ಲಿ ಅದಕ್ಕೆ ಯಾರು ಹೊಣೆ ಎಂದು ಸ್ಥಳೀಯರು ಪ್ರಶ್ನಿಸಿದರು.

ಭಾನುವಾರ ಬೆಳಿಗ್ಗೆ ನಾರಾಯಣ ಶಾಸ್ತ್ರಿ ರಸ್ತೆ ಸುಣ್ಣದಕೇರಿಯ ಕಾಂಚನಗಂಗಾ ವೈನ್ ಸ್ಟೋರ್ ಬಳಿ ಅಬಕಾರಿ ಅಧಿಕಾರಿಗಳು ಸೀಲ್ ಓಪನ್ ಮಾಡುವಾಗ ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಕೆ.ಆರ್. ಪೇಟೆ ಪೊಲೀಸರು ಸ್ಥಳಕ್ಕೆ ಬಂದು ಪ್ರತಿಭಟನಾಕಾರರನ್ನು ಮನೆಗೆ ಕಳುಹಿಸಿದರು. ಪ್ರತಿಭಟನೆಗೆ ಅವಕಾಶ ಇಲ್ಲಾ ಅಂತ ಸಿಬ್ಬಂದಿ ಮನವಿ ಮಾಡಿದರು. ಇದೇ ವೇಳೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಚಂದು ಮತ್ತು ಸಚಿನ್ ಎಂಬ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದರು.

Comments are closed.