ಅಂತರಾಷ್ಟ್ರೀಯ

ವಿಶ್ವದಾದ್ಯಂತ ಕೊರೋನಾ ಸಾವಿನ ಸಂಖ್ಯೆ 1.53 ಲಕ್ಷಕ್ಕೆ ಏರಿಕೆ; ಅಮೆರಿಕಾ ಒಂದರಲ್ಲೇ 7 ಲಕ್ಷ ಮಂದಿಗೆ ಸೋಂಕು ಪತ್ತೆ

Pinterest LinkedIn Tumblr

ಲಂಡನ್: ಚೀನಾದಲ್ಲಿ ಹುಟ್ಟಿ ವಿಶ್ವದ 200ಕ್ಕೂ ಹೆಚ್ಚು ದೇಶಗಳನ್ನು ವ್ಯಾಪಿಸಿ ಸಾವಿನ ಬಲೆಯನ್ನೇ ಬೀಸಿರುವ ಮಹಾಮಾರಿ ಕೊರೋನಾ ವೈರಸ್ ಸೋಂಕು ದಿನೇ ದಿನೇ ಸಾಕಷ್ಟು ವೇಗದಲ್ಲಿ ಹರಡುತ್ತಿದ್ದು, ಈ ವರೆಗೂ 1.53 ಲಕ್ಷ ಮಂದಿಯನ್ನು ಬಲಿಪಡೆದುಕೊಂಡಿದೆ.

ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು, ಒಟ್ಟಾರೆಯ ಪ್ರಪಂಚದಾದ್ಯಂತ 2,240,768 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ, ಅಲ್ಲದೆ, 153,871 ಮಂದಿ ವೈರಸ್’ಗೆ ಬಲಿಯಾಗಿದ್ದಾರೆ.

ಇನ್ನು ವಿಶ್ವದ ದೊಡ್ಡಣ್ಣ ಎಂದೇ ಖ್ಯಾತಿ ಹೊಂದಿರುವ ಅಮೆರಿಕಾದಲ್ಲಿ ಕೊರೋನಾ ವೈರಸ್ ತನ್ನ ಆರ್ಭಟವನ್ನು ಮುಂದುವರೆಸಿದ್ದು, ವೈರಸ್ ನಿಯಂತ್ರಿಸಲು ಸಾಧ್ಯವಾಗದೆ ಅಮೆರಿಕಾ ಕಂಗಾಲಾಗಿದೆ. ಆ ರಾಷ್ಟ್ರವೊಂದರಲ್ಲಿಯೇ ಈ ವರೆಗೂ 7,00,282 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇನ್ನು ಸ್ಪೇನ್ ನಲ್ಲಿ 190,839 , ಇಟಲಿಯಲ್ಲಿ 172,434 , ಫ್ರಾನ್ಸ್ ನಲ್ಲಿ 149,130, ಜರ್ಮನಿಯಲ್ಲಿ 141,397 ಪ್ರಕರಣಗಳು ಪತ್ತೆಯಾಗಿವೆ.

ಸಾವಿನ ಸಂಖ್ಯೆಯಲ್ಲಿ ಅಮೆರಿಕಾದಲ್ಲಿಯೇ ಹೆಚ್ಚಾಗಿದ್ದು, 36,822 ಮಂದಿ ಸಾವನ್ನಪ್ಪಿದ್ದಾರೆ. ಇಟಲಿಯಲ್ಲಿ 22,745, ಸ್ಪೇನ್ ನಲ್ಲಿ 20,002, ಫ್ರಾನ್ಸ್ 18,703, ಬ್ರಿಟನ್ ನಲ್ಲಿ 14,607ಮಂದಿ ಸಾವನ್ನಪ್ಪಿದ್ದಾರೆಂದು ವರದಿಗಳು ತಿಳಿಸಿವೆ.

Comments are closed.