ರಾಷ್ಟ್ರೀಯ

ಕೇರಳದಲ್ಲಿ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಯೊಬ್ಬರಿಗೆ 29ನೇ ದಿನಗಳ ನಂತರ ಕೊರೋನಾ ವೈರಸ್ ಪಾಸಿಟಿವ್!

Pinterest LinkedIn Tumblr

ತಿರುವನಂತಪುರಂ: ಕೊವಿಡ್-19 ಶಂಕಿತ ವ್ಯಕ್ತಿಗಳಿಗೆ 28 ದಿನಗಳ ಕ್ವಾರಂಟೈನ್ ಸಾಕು. 28 ದಿನಗಳ ನಂತರ ವೈರಸ್ ಪ್ರಸರಣವಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ನಂಬಿದೆ. ಆದರೆ ಕೇರಳದಲ್ಲಿ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಯೊಬ್ಬರಿಗೆ 29ನೇ ದಿನ ಕೊರೋನಾ ವೈರಸ್ ಪಾಸಿಟಿವ್ ದೃಢಪಟ್ಟಿದ್ದು, ಆರೋಗ್ಯ ತಜ್ಞರೇ ತಬ್ಬಿಬ್ಬುಗೊಳ್ಳುವಂತೆ ಮಾಡಿದೆ.

ಈ ಅಪರೂಪದ ಪ್ರಕರಣ ಆರೋಗ್ಯ ಅಧಿಕಾರಿಗಳನ್ನು ಗೊಂದಲಕ್ಕೀಡು ಮಾಡಿದ್ದು, ದುಬೈಯಿಂದ ಕೇರಳದ ಕೊಝಿಕೋಡ್ ನ ಎಡಚೇರಿಗೆ ಆಗಮಿಸಿದ ಆತನ ಸಹೋದರನಿಂದ ಈ ವ್ಯಕ್ತಿಗೆ ಸೋಂಕು ತಗುಲಿದೆ.

ಕ್ವಾರಂಟೈನ್ ನಲ್ಲಿದ್ದ ಈ ವ್ಯಕ್ತಿಗೆ ಈ ಮುಂಚೆ ನಡೆಸಿದ ಕೊವಿಡ್-19 ಪರೀಕ್ಷೆಯಲ್ಲಿ ನೆಗಟಿವ್ ಬಂದಿದೆ. ಆದರೆ 29ನೇ ದಿನ ಟೆಸ್ಟ್ ಮಾಡಿದಾಗ ಪಾಸಿಟಿವ್ ಬಂದಿದ್ದು, ತಜ್ಞರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಎಡಚೇರಿ ಪ್ರಕರಣ ಅತ್ಯಂತ ಅಪರೂಪದ ಪ್ರಕರಣವಾಗಿದ್ದು, ವೈರಸ್ ಹೇಗೆ ಪ್ರಸರಣ ಆಯಿತು ಎಂಬುದರ ಬಗ್ಗೆ ಹೆಚ್ಚಿನ ಅಧ್ಯನ ನಡೆಸಬೇಕಾಗಿದೆ. ಈ ವೈರಲ್ ಸೋಂಕು 28 ದಿನಗಳ ಪ್ರತ್ಯೇಕತೆಯ ಅವಧಿಯ ನಂತರವೂ ಸಂಭವಿಸಬಹುದು ಎಂಬುದು ಈ ಪ್ರಕರಣದಿಂದ ಸ್ಪಷ್ಟವಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ. ವಿ ಜಯಶ್ರಿ ಅವರು ಹೇಳಿದ್ದಾರೆ.

Comments are closed.