ಕರ್ನಾಟಕ

ಕರ್ನಾಟಕದಲ್ಲಿ ಇಂದು ಮತ್ತೆ 12 ಕೊರೋನಾ ವೈರಸ್ ಪಾಸಿಟಿವ್ ಪ್ರಕರಣಗಳು ಪತ್ತೆ; ಸೋಂಕಿತರ ಸಂಖ್ಯೆ 371ಕ್ಕೆ ಏರಿಕೆ

Pinterest LinkedIn Tumblr

 

ಬೆಂಗಳೂರು: ಕರ್ನಾಟಕದಲ್ಲಿ ಇಂದು ಮತ್ತೆ 12 ಕೊರೋನಾ ವೈರಸ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಆ ಮೂಲಕ ರಾಜ್ಯದಲ್ಲಿ ಒಟ್ಟಾರೆ ವೈರಸ್ ಸೋಂಕಿತರ ಸಂಖ್ಯೆ 371ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಶುಕ್ರವಾರ ಸಂಜೆ 5ರಿಂದ ಇಲ್ಲಿಯವರೆಗೆ ಒಟ್ಟು 12 ಹೊಸ ಕೊರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ಸೋಂಕಿತರ ಸಂಖ್ಯೆ 371ಕ್ಕೇರಿಕೆಯಾಗಿದೆ. ಇಲ್ಲಿಯವರೆಗೆ 13 ಜನರು ಮೃತಪಟ್ಟಿದ್ದು, 92 ಮಂದಿ ಚೇತರಿಕೆ ಹೊಂದಿದ್ದಾರೆ.

ಮೈಸೂರಿನಲ್ಲಿ ಹೊಸದಾಗಿ ಮತ್ತೆ ಮೂವರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಬಾಗಲಕೋಟೆಯಲ್ಲಿ ಇಬ್ಬರು, ಕಲಬುರಗಿಯಲ್ಲಿ ಇಬ್ಬರು, ಗದಗ, ಮಂಡ್ಯ, ವಿಜಯಪುರ, ಧಾರವಾಡ ಮತ್ತು ಬೆಳಗಾವಿಯಲ್ಲಿ ತಲಾ ಒಂದು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಒಟ್ಟಾರೆ ಇಂದು ರಾಜ್ಯದ್ಲಲಿ 11 ಪುರುಷರಿಗೆ ಮತ್ತು ಓರ್ವ ಮಹಿಳೆಯಲ್ಲಿ ಸೋಂಕು ಕಂಡುಬಂದಿದೆ. ಇಂದಿನ ಒಟ್ಟು 12 ಸೋಂಕು ಪ್ರಕರಣಗಳಲ್ಲಿ 6 ಜನರಿಗೆ ಸೆಕೆಂಡರಿ ಕಾಂಟಾಕ್ಟ್ ಗಳಲ್ಲಿ ವೈರಸ್ ಸೋಂಕು ದೃಢಪಟ್ಟಿದೆ.

ಕಲಬುರಗಿಯ 34 ವರ್ಷದ ವ್ಯಕ್ತಿ, ಇಲ್ಲಿನ ಶಹಾಬಾದ್ ನ 16 ವರ್ಷದ ಬಾಲಕ, ವಿಜಯಪುರದ 60 ವರ್ಷದ ವೃದ್ಧ, ಹುಬ್ಬಳ್ಳಿ, ಧಾರವಾಡದ 63 ವರ್ಷದ ವೃದ್ಧ,ಬೆಳಗಾವಿ ಹಿರೇಬಾಗೇವಾಡಿಯಲ್ಲಿ 45ವರ್ಷದ ವ್ಯಕ್ತಿ, ಮೈಸೂರು ನಂಜನಗೂಡಿನಲ್ಲಿ 30 ಹಾಗೂ 50 ವರ್ಷದ ವ್ಯಕ್ತಿಗಳು, ಬಾಗಲಕೋಟೆಯ 48 ಮಹಿಳೆಯರು ಹಾಗೂ 65 ವರ್ಷದ ವ್ಯಕ್ತಿ, ಮೈಸೂರಿನ 65 ವರ್ಷದ ವೃದ್ಧ, ಗದಗದ 42 ವರ್ಷದ ವ್ಯಕ್ತಿ ಹಾಗೂ ಮಂಡ, ಮಳವಳ್ಳಿಯ 39 ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ.

ಮೈಸೂರಿಗೆ ನಂಜನಗೂಡು ನಂಜು!
ಮೈಸೂರು ಜಿಲ್ಲೆಯಲ್ಲಿ ಮೂರು ಪ್ರಕರಣ ದಾಖಲಾಗಿದೆ. ಇದರಲ್ಲಿ ಇಬ್ಬರಿಗೆ ನಂಜನಗೂಡು ನಂಟಿರುವುದು ದೃಢಪಟ್ಟಿದೆ. ಮತ್ತೊಬ್ಬರ ವೃದ್ಧಿಗೆ ಸಂಪರ್ಕದಿಂದ ಸೋಂಕು ತಗುಲಿದೆ. ಇನ್ನು ಮಳವಳ್ಳಯಲ್ಲಿ ತಬ್ಲಿಘಿ ಸಂಪರ್ಕದಲ್ಲಿದ್ದ ಮತ್ತೊರ್ವನಿಗೆ ಸೋಂಕು ತಟ್ಟಿದೆ. ಪೇಷೆಂಟ್ ನಂಬರ್ 138 ಸೋಂಕಿತನ ಸಂಪರ್ಕದಲ್ಲಿದ್ದ 39 ವರ್ಷದ ವ್ಯಕ್ತಿಯಲ್ಲಿ ಇದೀಗ ಸೋಂಕು ಪತ್ತೆಯಾಗಿದೆ. ಮಳವಳ್ಳಿಯಲ್ಲಿ ದಿನೇದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಮಂಡ್ಯ ಜಿಲ್ಲೆಯಲ್ಲಿ ಕಂಡುಬಂದ 12 ಪ್ರಕರಣಗಳ ಪೈಕಿ 11 ಮಳವಳ್ಳಿಯಲ್ಲಿಯೇ ಪತ್ತೆಯಾಗಿದೆ. ಇತ್ತ ಬಾಗಲಕೋಟೆಯಲ್ಲಿ ಇಬ್ಬರಿಗೆ ಕೊರೋನಾ ಸೋಂಕು ತಗುಲಿದ್ದು, ಈ ಹಿಂದೆ ನಾಲ್ಕು ವರ್ಷದ ಮಗುವಿಗೆ ಕೊರೊನಾ ಸೋಂಕು ತಗುಲಿತ್ತು. ಈ ಮಗುವಿನಿಂದ ಪಕ್ಕದ ಮನೆಯ ಇಬ್ಬರಿಗೆ ಸೋಂಕು ತಗುಲಿದೆ ಎಂದು ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Comments are closed.