ಕ್ರೀಡೆ

ಕ್ರಿಕೆಟಿಗ ಕೇವಿನ್ ಪೀಟರ್ ಪ್ರಕಾರ ಭಾರತದ ಶ್ರೇಷ್ಠ ನಾಯಕ ಯಾರು ಗೊತ್ತಾ…?

Pinterest LinkedIn Tumblr

ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ 2007ರ ವಿಶ್ವ ಟಿ20 ಮತ್ತು 2011ರ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದು ನನ್ನ ಪ್ರಕಾರ ಇದುವರೆಗಿನ ಶ್ರೇಷ್ಠ ನಾಯಕ. ಅವರ ಹಿರಿಯ ವಿರುದ್ಧ ವಾದಿಸುವುದು ಕಷ್ಟ ಎಂದು ಕೇವಿನ್ ಪೀಟರ್ ಸನ್ ಹೇಳಿದ್ದಾರೆ.

ಭಾರತದ ನಾಯಕತ್ವ ಜೊತೆಗೆ ಸಿಎಸ್‌ಕೆ ನಾಯಕತ್ವ ವಹಿಸಿದ್ದ ಎಂಎಸ್ ಧೋನಿಯಿಂದ ಪ್ರತಿಯೊಬ್ಬರು ನಿರೀಕ್ಷಿಸುತ್ತಾರೆ. ಅಂತೆ ಅವರು ಹೇಗೆ ತಮ್ಮ ಜೀವನ್ನು ನಡೆಸಬೇಕು ಎಂಬುದು ತಿಳಿದಿದೆ. ಇನ್ನು ಎಂಎಸ್ ಧೋನಿ ವಿರುದ್ಧ ಹೋಗುವುದು ನಿರೀಕ್ಷೆಯ ಭಾರದಿಂದ ತುಂಬಾ ಕಷ್ಟಕರವಾಗಿರುತ್ತದೆ ಎಂದು ಪೀಟರ್ಸನ್ ಸ್ಟಾರ್ ಸ್ಪೋರ್ಟ್ಸ್ ಗೆ ತಿಳಿಸಿದರು.

ಭಾರತವು ಧೋನಿ ನೇತೃತ್ವದಲ್ಲಿ ಭಾರಿ ಯಶಸ್ಸನ್ನು ಕಂಡಿತು. 2007ರ ವಿಶ್ವ ಟಿ20 ಮತ್ತು 2011ರ ವಿಶ್ವಕಪ್ ಅನ್ನು ಗೆದ್ದು ಚಾಂಪಿಯನ್ ಪಟ್ಟ ಅಲಂಕರಿಸಿತ್ತು ಎಂದರು.

ಕಳೆದ ಜುಲೈನಲ್ಲಿ ನಡೆದ ಏಕದಿನ ವಿಶ್ವಕಪ್‌ನಿಂದ ಭಾರತದ ಸೆಮಿಫೈನಲ್ ನಿರ್ಗಮನದ ನಂತರ ಎಂಎಸ್ ಧೋನಿ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್ ಆಡದೆ ವಿರಾಮ ಜೀವನ ನಡೆಸುತ್ತಿದ್ದಾರೆ.

Comments are closed.