ಕರ್ನಾಟಕ

ಕಲಬುರ್ಗಿಯಲ್ಲಿ ಮೂರನೇ ಬಲಿ, ರಾಜ್ಯದಲ್ಲಿ ಕೊರೋನಾ ಸಾವಿನ ಸಂಖ್ಯೆ 7ಕ್ಕೇರಿಕೆ

Pinterest LinkedIn Tumblr


ಕಲಬುರ್ಗಿ(ಏ.13): ಮಾರಕ ಕೊರೋನಾ ವೈರಸ್​ಗೆ ಕಲಬುರ್ಗಿಯಲ್ಲಿ ಮತ್ತೊಂದು ಬಲಿಯಾಗಿದೆ. ಇಂದು 55 ವರ್ಷದ ಸೋಂಕಿತ ವ್ಯಕ್ತಿ ಸಾವನ್ನಪ್ಪಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕೊರೋನಾ ವೈರಸ್​​ಗೆ ಸಾವನ್ನಪ್ಪಿದವರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ. ಇದುವರೆಗೂ ಈ ಸಾವಿನಿಂದಾಗಿ ರಾಜ್ಯದಲ್ಲಿ ಮೃತರ ಸಂಖ್ಯೆ 7ಕ್ಕೇರಿದೆ.

ಇನ್ನು, ಮೃತ ವ್ಯಕ್ತಿ ಮೋಮಿನಪುರ ಬಡಾವಣೆ ನಿವಾಸಿ ಎಂದು ಗುರುತಿಸಲಾಗಿದೆ. ಈತ ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ. ವೈದರು ವೆಂಟಿಲೇಷನ್ ಅಳವಡಿಸಿ ಚಿಕಿತ್ಸೆ ನೀಡುತ್ತಿದ್ದರು. ಆದರೀಗ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈತನಿಗೆ ದೆಹಲಿ ನಿಜಾಮುದ್ದೀನ್​ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದವರಿಂದ ಸೋಂಕು ಬಂದಿತ್ತು ಎಂದು ಜಿಲ್ಲಾಧಿಕಾರಿ ಶರತ್ ಬಿ ಖಚಿತಪಡಿಸಿದ್ಧಾರೆ.

ಈ ಹಿಂದೆ ಕಲಬುರ್ಗಿಯಲ್ಲಿ 65 ವರ್ಷದ ಸೋಂಕಿತ ವ್ಯಕ್ತಿ ಸಾವನ್ನಪ್ಪಿದ್ದರು. ಈತನಿಗೆ ಮಾತ್ರ ಯಾವುದೇ ಹಂತದಲ್ಲೂ ಸೋಂಕಿತರೊಂದಿಗೆ ಸಂಪರ್ಕ ಹೊಂದಿರಲಿಲ್ಲ. ಅಲ್ಲದೆ ವೃದ್ಧನಿಗೆ ಯಾವುದೇ ರೀತಿಯ ಟ್ರಾವಲ್ ಹಿಸ್ಟರಿ ಕೂಡ ಇರಲಿಲ್ಲ. ಅಲ್ಲದೆ ದೆಹಲಿಯ ನಿಜಾಮುದ್ದೀನ್ ಮಸೀದಿಗೂ ಹೋಗಿರಲಿಲ್ಲ ಎಂದು ತಿಳಿದು ಬಂದಿತ್ತು.

ಇನ್ನು, ಕಲಬುರ್ಗಿಯಲ್ಲಿ ಕೊರೋನಾ ಹತೋಟಿಗೆ ಬಾರದ ಕಾರಣ ಏಪ್ರಿಲ್​​ 31ನೇ ತಾರೀಕಿನವರೆಗೂ ನಿಷೇಧಾಜ್ಞೆ ಮುಂದುವರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಶರತ್​​ ಬಿ ತಿಳಿಸಿದ್ಧಾರೆ.

ಕರ್ನಾಟಕದಲ್ಲಿ ಕೊರೋನಾ ವೈರಸ್​ ಆರ್ಭಟ ಮುಂದುವರಿದಿದೆ. ಇಂದು ರಾಜ್ಯದಲ್ಲಿ ಮತ್ತೆ 15 ಮಂದಿಗೆ ಕೊರೋನಾ ಬಂದಿದೆ. ಕಳೆದ ಎರಡು ದಿನಗಳಲ್ಲಿ 32 ಕೊರೋನಾ ಪಾಸಿಟಿವ್​​​ ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕದ ಇದುವರೆಗೂ ಸೋಂಕಿತರ ಸಂಖ್ಯೆ 247ಕ್ಕೆ ಏರಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ ನೀಡಿದೆ.

Comments are closed.