ಕರಾವಳಿ

ಮಂಗಳೂರಿನಲ್ಲಿ ಕೋವಿಡ್ -19 ಪ್ರಯೋಗಾಲಯ ತೆರೆಯುವಂತೆ ಎಸ್.ಅಬೂಬಕ್ಕರ್ ಸಜೀಪ ಆಗ್ರಹ

Pinterest LinkedIn Tumblr

ಮಂಗಳೂರು : ಕೋವಿಡ್ – 19 ಕೊರೋನ ಎಂಬ ಸಾಂಕ್ರಾಮಿಕ ರೋಗವಿ ಇದೀಗ 3 ಹಂತಕ್ಕೆ ತಲುಪಿರುವಂತಹಾ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ – 19 ಪತ್ತೆ ಹಚ್ಚುವಂತಹಾ ಪ್ರಯೋಗಾಲಯವಿಲ್ಲದ್ದು ವಿಪರ್ಯಾಸ.

ವೈಧ್ಯಕೀಯ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವಂತಹ ದಕ್ಷಿಣ ಕನ್ನಡ ಜಿಲ್ಲೆಗೆ ನಮ್ಮ ಹೊರ ಜಿಲ್ಲೆಯಿಂದ ಹಾಗೂ ಹೊರ ರಾಜ್ಯಗಳಿಂದಲೂ ರೋಗಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಚಿಕಿತ್ಸೆಗಾಗಿ ಬರುತ್ತಿದ್ದು ನಮ್ಮ ಜಿಲ್ಲೆಯಲ್ಲಿ 4 – 5 ವೈಧ್ಯಕೀಯ ಕಾಲೇಜುಗಳೂಬ್ಕಾರ್ಯಾಚರಿಸುತ್ತಿವೆ.

ಅಲ್ಲದೇ ಆಡಳಿತ ಪಕ್ಷದ 7 ಶಾಸಕರು, ಸಂಶದರು, ಉಸ್ತುವಾರಿ ಸಚಿವರುಗಳು ಇರುವಂತಹಾ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಸಾಮಾನ್ಯರಿಗೆ ಕೋವಿಡ್ – 19 ಸೋಂಕು ತಗುಲಿದರೆ ಅದನ್ನು ದೃಡಪಡಿಸಬೇಕಾದರೆ ಗಂಟಲಿನ ದ್ರವವನ್ನು ಹಾಸನ ಅಥವಾ ಮೈಸೂರಿನಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಬೇಕಾಗುತ್ತದೆ, ಅಲ್ಲಿಂದ ಅದರ ವರದಿ ಬರಲು ಕನಿಷ್ಟ 2-3 ದಿನಗಳು ಬೇಕಾಗುತ್ತದೆ, ಅದೇ ಪ್ರಯೋಗಾಲಯವು ಮಂಗಳೂರಿನಲ್ಲಿದ್ದರೆ ಸೂಕ್ತ ಸಮಯದಲ್ಲಿ ವರದಿಯನ್ನಾದರಿಸಿ ಚಿಕಿತ್ಸೆಯನ್ನು ನೀಡಲು ಸಹಕಾರಿಯಾಗುತ್ತದೆ.

ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯು ಅತ್ಯಂತ ಇತಿಹಾಸ ಪ್ರಸಿಧ್ಧವಾಗಿದ್ದರೂ ಇಲ್ಲಿ ಯಾವುದೇ ಪರೀಕ್ಷೆಗಳನ್ನು ನಡೆಸಬೇಕಾದರೂ ಖಾಸಗಿ ಪ್ರಯೋಗಾಲಯಕ್ಕೆ ಅಂದರೆ ಆಸ್ಪತ್ರೆಯಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸುವುದು ರೂಡಿಯಾಗಿಬಿಟ್ಟಿದೆ, ಇದರ ಹಿಂದೆ ಕಮಿಷನ್ ದಂಧೆಯ ಬಗ್ಗೆಯೂ ಕೇಳಿಬರುತ್ತಿದೆ.

ಈ ಬಗ್ಗೆ ಸರಕಾರವು ಕೂಡಲೇ ಗಮನಹರಿಸಿ ದಕ್ಷಿಣ ಕನ್ನಡ ಜಿಲ್ಲೆಯ ಹೃದಯ ಭಾಗವಾದ ಮಂಗಳೂರಿನಲ್ಲಿ ಸುಸಜ್ಜಿತ ಪ್ರಯೋಗಾಲಯವನ್ನು ಸ್ಥಾಪಿಸಬೇಕು ಎಂದು ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ನಿಕಟಪೂರ್ವ ಉಪಾಧ್ಯಕ್ಷ ಎಸ್.ಅಬೂಬಕ್ಕರ್ ಸಜೀಪ ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Comments are closed.