ಆರೋಗ್ಯ

ಕೊರೋನಾ ಭೀತಿ- ಕುಂದಾಪುರ ನಗರದಲ್ಲಿ ಕೀಟ ನಾಶಕ ಸಿಂಪಡನೆ

Pinterest LinkedIn Tumblr

ಕುಂದಾಪುರ: ಕೋವಿಡ್‌ 19 ವೈರಾಣು ಒಬ್ಬರಿಂದ ಒಬ್ಬರಿಗೆ ಹರಡದಂತೆ, ಸೋಂಕು ಹರಡುವ ಮುನ್ನವೇ ಸಾಯುವಂತೆ ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಭಾನುವಾರದಿಂದ ರೋಗನಿರೋಧಕ ಅಥವಾ ಕೀಟ ನಾಶಕ ರಾಸಾಯನಿಕ ಸಿಂಪಡಣೆ ನಡೆಸಲಾಗುತ್ತಿದೆ.

ಪುರಸಭೆಯ ವಾಹನ ಸಹಿತ ಯಂತ್ರ ವನ್ನು ಬಳಸಿಕೊಂಡು ರಾಸಾಯನಿಕಗಳನ್ನು ಸಿಂಪಡಿಸಲಾಗುತ್ತಿದೆ. ಬಸ್ ನಿಲ್ದಾಣ, ಆಯಕಟ್ಟಿನ ಸ್ಥಳಗಳಲ್ಲಿ ಈ ರೋಗನಿರೋಧಕ ಮದ್ದು ಸಿಂಪಡಿಸಲಾಗುತ್ತಿದೆ.

ಇದರೊಂದಿಗೆ ಪುರಸಭೆ ವತಿಯಿಂದಲೇ ವಿದ್ಯುತ್‌ ಪೂರೈಕೆಯಲ್ಲಿ ಎಲ್ಲಿಯೂ ವ್ಯತ್ಯಯವಾಗದಂತೆ, ನಿರಂತರವಾಗಿ ನೀರು ಸರಬರಾಜು ಮಾಡಲಾಗುತ್ತಿದೆ.

ಇನ್ನು ದೇಶವ್ಯಾಪಿ ಕರ್ಫ್ಯೂ ಜಾರಿಯಲ್ಲಿದ್ದರೂ, ಕುಂದಾಪುರ ಪುರಸಭೆಯ ಪೌರಕಾರ್ಮಿಕರು ನಿರಂತರವಾಗಿ ಸ್ವತ್ಛತಾ ಕಾರ್ಯವನ್ನು ಮಾಡುತ್ತಿದ್ದಾರೆ ಎನ್ನುವುದಾಗಿ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.

Comments are closed.