ಕರಾವಳಿ

ಕೊರೋನಾ ವೈರಸ್ ಭೀತಿ ಹಿನ್ನೆಲೆ: ಮಾ. 31 ರ ವರೆಗೆ ಗ್ರಂಥಾಲಯ ಸೇವೆ ಸ್ಥಗಿತ

Pinterest LinkedIn Tumblr

ಉಡುಪಿ: ಕೋವಿಡ್-19 (ಕರೋನಾ ವೈರಾಣು ಕಾಯಿಲೆ-2019) ಹರಡುವುದನ್ನು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರದ ಆದೇಶದಂತೆ ಹಾಗೂ ಇಲಾಖಾ ನಿರ್ದೇಶಕರ ಸೂಚನೆ ಮೇರೆಗೆ ನಗರ ಕೇಂದ್ರ ಗ್ರಂಥಾಲಯ, ಕೆ. ಎಂ. ಮಾರ್ಗ ಉಡುಪಿಯ ಮುಖ್ಯ ಶಾಖೆ ಹಾಗೂ ಇದರ ವ್ಯಾಪ್ತಿಯಲ್ಲಿ ಬರುವ ಶಾಖಾ ಗ್ರಂಥಾಲಯಗಳಲ್ಲಿ ಮಾರ್ಚ್ 31 ರವರೆಗೆ ಸಾರ್ವಜನಿಕ ಓದುಗರಿಗೆ ತಾತ್ಕಾಲಿಕವಾಗಿ ಗ್ರಂಥಾಲಯದ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

(ಸಾಂದರ್ಭಿಕ ಚಿತ್ರ)

ಪುಸ್ತಕ ಎರವಲು ಸೇವೆಯನ್ನು ಮಾತ್ರ ನೀಡಲಾಗುವುದು ಎಂದು ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.