(ಸಾಂದರ್ಭಿಕ ಚಿತ್ರ)
ಮಂಗಳೂರು ಮಾರ್ಚ್ 19 ; ಮಂಗಳೂರು ಮಹಾನಗರಪಾಲಿಕೆಯ ನೀರು ಸರಬರಾಜು ವ್ಯವಸ್ಥೆ ತುಂಬೆಯಿಂದ ಬೆಂದೂರು ಮತ್ತು ಪಣಂಬೂರು ಕಡೆಗೆ ನೀರು ಪೂರೈಸುವ 1000 ಮಿ.ಮೀ. ವ್ಯಾಸದ ಮುಖ್ಯ ಕೊಳವೆಯು ಅಡ್ಯಾರ್ ಕಟ್ಟೆ ಬಳಿ ಹಾಗೂ ಕೂಳೂರು ಗೋಲ್ಡ್ ಪಿಂಚ್ ಸಿಟಿ ಬಳಿ ಸೋರುವಿಕೆ ಉಂಟಾಗಿದೆ.
ನೀರು ಸೋರುವಿಕೆ ದುರಸ್ತಿ ಕಾರ್ಯವನ್ನು ಮಾರ್ಚ್ 19 ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಹಮ್ಮಿಕೊಂಡಿದ್ದು, ಸದ್ರಿ ಅವಧಿಯಲ್ಲಿ ಪಣಂಬೂರು, ಕಾನ, ಬಾಳ, ಕಾಟಿಪಳ್ಳ, ಮುಕ್ಕ, ಮಾಲೆಮಾರ್, ಕೋಡಿಕಲ್ ಹಾಗೂ ಕಾರ್‌ಸ್ಟ್ರೀಟ್, ಬಂದರು, ಕುದ್ರೋಳಿ ಹಾಗೂ ಇತರ ಪ್ರದೇಶಗಳಿಗೆ ಸಂಪೂರ್ಣವಾಗಿ ನೀರು ನಿಲುಗಡೆಗೊಳಿಸಲಾಗುವುದು ಎಂದು ಮಹಾನಗರಪಾಲಿಕೆ ಪ್ರಕಟಣೆ ತಿಳಿಸಿದೆ.

Comments are closed.