
ಬೆಂಗಳೂರು: ನಟಿಯರು ಹಾಟ್ ಬಟ್ಟೆ ಧರಿಸಿದಾಗ ಟ್ರೋಲ್ ಮಾಡುವವರಿಗೆ ತೆಲುಗಿನ ಖ್ಯಾತ ನಟಿ ಸಮಂತಾ ಅಕ್ಕಿನೇನಿ ಸವಾಲ್ ಹಾಕಿದ್ದಾರೆ.
ತಾವು ತೊಡುವ ಬಟ್ಟೆಯಿಂದಾಗಿ ಸಮಂತಾ ಅವರು ಆಗಾಗ ಸುದ್ದಿಯಾಗುತ್ತಿರುತ್ತಾರೆ. ಈ ಹಿಂದೆ ವಿದೇಶಕ್ಕೆ ತೆರಳಿದ್ದ ಅವರು ಬಿಕಿನಿ ಧರಿಸಿ ಸುದ್ದಿಯಾಗಿದ್ದರು. ಜೊತೆಗೆ ಕೆಲ ಟ್ರೋಲ್ ಪೇಜ್‍ಗಳು ಹಾಗೂ ಅಭಿಮಾನಿಗಳು ಕೂಡ ಅಕ್ಕಿನೇನಿ ಕುಟುಂಬದ ಸೊಸೆಯಾಗಿ ನೀವು ರೀತಿ ಬಟ್ಟೆ ಧರಿಸಬಾರದು ಎಂದು ಟ್ರೋಲ್ ಮಾಡಿದ್ದರು.
ಅಂದು ಬಿಕಿನಿ ಹಾಕಿಕೊಂಡಿದ್ದಕ್ಕೆ ಟ್ರೋಲ್ ಮಾಡಿದವರ ವಿರುದ್ಧ ಖಾರವಾಗಿ ಪ್ರತಿಕ್ರಿಯಿಸಿದ್ದ ಸಮಂತಾ, ಮಧ್ಯದ ಬೆರಳಿನ ಫೋಟೋ ಹಾಕಿ ಟ್ರೋಲ್‍ಗಳಿಗೆ ಚಮಕ್ ನೀಡಿದ್ದರು. ಈಗ ಮತ್ತೆ ಹಾಟ್ ಆಗಿ ಕಾಣಿಸಿಕೊಂಡಿರುವ ಸಮಂತಾ, ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ನಾನು ಟ್ರೋಲ್‍ಗಳಿಗೆ ಭಯಪಡುವುದಿಲ್ಲ ಎಂದು ಸವಾಲ್ ಹಾಕಿದ್ದಾರೆ.
ಈಗ ಸಂದರ್ಶನವೊಂದರಲ್ಲಿ ಟ್ರೋಲ್ ವಿಚಾರವಾಗಿ ಮಾತನಾಡಿರುವ ಸಮಂತಾ, ನನಗೆ ಇನ್ನೂ ನೆನಪಿದೆ ನಾನು ಮದುವೆಯಾದ ಮೇಲೆ ಧರಿಸಿದ್ದ ಒಂದು ಡ್ರೆಸ್ ಸಖತ್ ಟ್ರೋಲ್ ಆಗಿತ್ತು. ಈ ಡ್ರೆಸ್‍ನ ಫೋಟೋ ಇಟ್ಟುಕೊಂಡು ಭಯಾಂಕರವಾಗಿ ಟ್ರೋಲ್ ಮಾಡಿದ್ದರು. ಆಗ ನನಗೆ ಬಹಳ ಬೇಜಾರಾಗಿತ್ತು. ಆದರೆ ನಾನು ಮತ್ತೆ ಎರಡನೇ ಬಾರಿ ಅದೇ ಉಡುಪಿನಲ್ಲಿ ಕಾಣಿಸಿಕೊಂಡಾಗ ಅವರು ನನ್ನನ್ನು ಟ್ರೋಲ್ ಮಾಡಲಿಲ್ಲ ಎಂದು ಹೇಳಿದ್ದಾರೆ.
ಮೊದಲು ನನಗೆ ಟ್ರೋಲ್‍ಗಳು ಎಂದರೆ ಭಯವಾಗುತ್ತಿತ್ತು. ಆ ಭಯ ನಾವು ಒಂದು ಹೆಜ್ಜೆ ಇಡುವವರಿಗೆ ಅಮೇಲೆ ಅದು ನಮಗೆ ಅಭ್ಯಾಸವಾಗಿ ಹೋಗುತ್ತದೆ. ಹೀಗೆ ಹೇಳುತ್ತಿದ್ದೇನೆ ಎಂದ ಮಾತ್ರಕ್ಕೆ ನಾನು ಅಷ್ಟೊಂದು ಧೈರ್ಯಶಾಲಿಯಲ್ಲ. ಕೆಲವು ಬದಲಾಗಬೇಕು. ಆ ಬದಲಾವಣೆ ಸಮಾಜದಲ್ಲಿ ಬರಲು ಏನೂ ಮಾಡಬೇಕು ಅದನ್ನು ನಾನು ಮಾಡುತ್ತೇನೆ ಎಂದು ಸಮಂತಾ ಟ್ರೋಲ್‍ಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಇತ್ತೀಚಿಗೆ ಫ್ಲಾಪ್ ನಟಿ ಎಂದು ಕರೆದವರ ವಿರುದ್ಧ ಕಿಡಿಕಾರಿದ್ದ ಸಮಂತಾ, ಸ್ಟಾರ್ ನಟರ ಸಿನಿಮಾಗಳು ಸಾಲು ಸಾಲು ಫ್ಲಾಪ್ ಆದರೂ ಅವರನ್ನು ಒಪ್ಪುತ್ತಾರೆ. ಆದರೆ ನಟಿಯರು ಕಷ್ಟಪಟ್ಟು ಸಿನಿಮಾ ಮಾಡಿದರೂ ಯಾರೂ ಅವರನ್ನು ಹೊಗಳುವುದಿಲ್ಲ. ಸಿನಿಮಾ ಫ್ಲಾಪ್ ಆದರೆ ಆ ಚಿತ್ರದ ನಟಿಯರೇ ಕಾರಣ ಎಂದು ಹೇಳುತ್ತಾರೆ. ನಟಿಯರ ಒಂದು ಸಿನಿಮಾ ಸೋತರು ಫ್ಲಾಪ್ ಎಂದು ಕರೆಯುತ್ತಾರೆ ಎಂದು ಗರಂ ಆಗಿದ್ದರು.
Comments are closed.