ಮಂಗಳೂರು. ಮಾರ್ಚ್.13 : ಕೊರೊನಾ ಭೀತಿ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ, ರಾಜ್ಯ ಪಠ್ಯಕ್ರಮ ಸಿಬಿಎಸ್ಇ, ಐಸಿಎಸ್ಇ ಸಹಿತವಾಗಿ ಎಲ್ಲಾ ಶಾಲೆಗಳ ಆರನೇ ತರಗತಿಯವರಿಗೆ ವಿದ್ಯಾರ್ಥಿಗಳಿಗೆ ನಾಳೆಯಿಂದ ಬೇಸಿಗೆ ರಜೆ ಘೋಷಣೆ ಮಾಡಲಾಗಿದೆ. ಈಗಾಗಲೇ ಪ್ರಾರಂಭವಾಗಿದ್ದ ಪರೀಕ್ಷೆಯನ್ನು ಸಹ ಸ್ಥಗಿತಗೊಳಿಸಿ ಬೇಸಿಗೆ ರಜೆ ಘೋಷಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚಿಸಿದೆ.
ಒಂದರಿಂದ 6ನೇ ತರಗತಿ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನಲ್ಲಿ (2019-20) ನೇ ಶೈಕ್ಷಣಿಕ ಸಾಲಿನಲ್ಲಿ FA-1, FA-2,FA-3,FA-4 ಮತ್ತು ಎಸ್ ಎ -2 ರಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಶ್ರೇಣಿಕೃತ ಫಲಿತಾಂಶ ಪ್ರಕಟಿಸಿ ಮುಂದಿನ ತರಗತಿಗೆ ಭಡ್ತಿ ನೀಡುವಂತೆ ಆದೇಶಿಸಲಾಗಿದೆ.
ಏಳರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತೆ ರಜೆ ಇರಲಿದ್ದು ಯಾವುದೇ ತರಗತಿಯನ್ನು ನಡೆಸುವಂತಿಲ್ಲ. 9ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧ ತರಗತಿ ಪರೀಕ್ಷಾ ದಿನದಂದು ಮಾತ್ರ ಹಾಜರಾಗಲು ಸೂಚಿಸಲಾಗಿದೆ.
ಬೇಸಿಗೆ ರಜೆ ನಂತರ 2020 – 21 ನೇ ಶೈಕ್ಷಣಿಕ ಸಾಲಿನಲ್ಲಿ ಶಾಲೆಗಳನ್ನು ವೇಳಾಪಟ್ಟಿಯಂತೆ ಪುನರಾರಂಭಿಸ ಬೇಕು ಎಂದು ಇಲಾಖೆಯ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಎಸ್ ಎಸ್ ಎಲ್ ಸಿ ಇತರೆ ಪರೀಕ್ಷೆಗಳು ಎಂದಿನಂತೆ ನಡೆಯಲಿದೆ.
ಶಾಲಾ ಕಾಲೇಜು ರಜಾ ವಿವರ :
ಜಿಲ್ಲೆಯ ಎಲ್ಲಾ ಅಂಗನವಾಡಿ, ನರ್ಸರಿ ಮತ್ತು ಎಲ್ ಕೆಜಿ, ಯು ಕೆಜಿ ಸಂಸ್ಥೆಗಳಿಗೆ ಮುಂದಿನ ಆದೇಶ ಬರುವವರೆಗೆ ರಜೆ ನೀಡಲಾಗಿದೆ.
1 ರಿಂದ 6 ನೇ ತರಗತಿ – ಮಾಚ್೯ 14 ರಿಂದ ರಜೆ
7 ರಿಂದ 9 ನೇ ತರಗತಿ – ಮಾಚ್೯ 23 ರೊಳಗೆ ಪರೀಕ್ಷೆ ಮುಗಿಸಿ, ಬಳಿಕ ರಜೆ
SSLC – ಈಗಾಗಲೇ ನಿಗದಿಯಾಗಿರುವಂತೆ ಮಾಚ್೯ 27 ರಿಂದ ಪರೀಕ್ಷೆ ನಡೆಯಲಿದೆ.
1 st PUC – ವಾರ್ಷಿಕ ಪರೀಕ್ಷೆ ಈಗಾಗಲೇ ಫೆಬ್ರವರಿಯಲ್ಲಿ ಮುಕ್ತಾಯಗೊಂಡು, ರಜೆ ನೀಡಲಾಗಿದೆ.
2nd PUC – ಪಬ್ಲಿಕ್ ಪರೀಕ್ಷೆ ಈಗಾಗಲೇ ಆರಂಭವಾಗಿದ್ದು, ನಿಗದಿಯಂತೆ ನಡೆಯಲಿವೆ.
Degree Colleges/Polytechnic/University: ಮಾಚ್೯ 28ರವರೆಗೆ ರಜೆ.

Comments are closed.