ಮಂಗಳೂರು: ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ ರಥಬೀದಿ ಮಂಗಳೂರು ಇದರ ಶಿಲಾಮಯ ಸುತ್ತುಪೌಳಿಯ ದ್ವಾರ ಪ್ರತಿಷ್ಠೆ ಬುಧವಾರ ಪ್ರಾತಃ ಕಾಲ ಜರಗಿತು. ಧಾರ್ಮಿಕ ವಿಧಿವಿಧಾನಗಳನ್ನು ಕ್ಷೇತ್ರದ ಪ್ರಧಾನ ಅರ್ಚಕರಾದ ಧನಂಜಯ ಪುರೋಹಿತರು ನೆರೆವೇರಿಸಿದರು.
ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಕೆ. ಕೇಶವ ಆಚಾರ್ಯ, 2ನೇ ಮೊಕ್ತೇಸರ ಎಂ. ಸುಂದರ್ ಆಚಾರ್ಯ ಬೆಳುವಾಯಿ, ಮೂರನೇ ಮೊಕ್ತೇಸರ ಎ. ಲೋಕೇಶ್ ಆಚಾರ್ಯ ಬಿಜೈ, ಜೀರ್ಣೋದ್ದಾರ ಸಮಿತಿಯ ಗೌರವಾಧ್ಯಕ್ಷ ಲೋಕೇಶ್ ಆಚಾರ್ಯ ಪುಂಜಾಲಕಟ್ಟೆ, ಜೀರ್ಣೋದ್ದಾರ ಸಮಿತಿಯ ಕಾರ್ಯಾಧ್ಯಕ್ಷ ಕೈಂತಿಲ ಸದಾಶಿವ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಮ. ವೆಂಕಟೇಶ ಆಚಾರ್, ಶಿಲ್ಪಿ ಸತೀಶ್ ಆಚಾರ್ಯ ಕಾರ್ಕಳ, ವಾಸ್ತು ಶಿಲ್ಪಿ ಜೋಕಟ್ಟೆ ಪ್ರಭಾಕರ ಆಚಾರ್ಯ, ಕ್ಷೇತ್ರದ ಮಾಜಿ ಮೊಕ್ತೇಸರರಾದ ಮುನಿಯಲ್ ದಾಮೋದರ ಆಚಾರ್ಯ, ಕಡೇಶ್ವಾಲ್ಯ ಉಮೇಶ್ ಆಚಾರ್ಯ, ಹಾಗೂ ಶ್ರೀ ಕ್ಷೇತ್ರದ ಆಡಳಿತ ಮಂಡಳಿ, ಜೀರ್ಣೋದ್ಧಾರ ಸಮಿತಿ ಸದಸ್ಯರು, ಭಕ್ತಾದಿಗಳು, ಶ್ರೀ ಕಾಳಿಕಾಂಬಾ ಸೇವಾ ಸಮಿತಿ, ವಿಶ್ವಬ್ರಾಹ್ಮಣ ಮಹಿಳಾ ಸಮಿತಿಯ ಸದಸ್ಯರು ಹಾಗು ಅನೇಕ ಭಕ್ತಾಧಿಗಳು ಉಪಸ್ಥಿತರಿದ್ದರು.


Comments are closed.