
ಇಸ್ಲಾಮಾಬಾದ್: ಅಮೆರಿಕದ ಭದ್ರತಾ ಪಡೆಗಳಿಗೆ ಪಾಕಿಸ್ಥಾನದಲ್ಲಿ ಅಡಗಿದ್ದ ಉಗ್ರ ಒಸಾಮಾ ಬಿನ್ ಲಾಡೆನ್ ನನ್ನು ಹಿಡಿಯುವಲ್ಲಿ ಸಹಕಾರ ನೀಡಿದ್ದ ಪಾಕಿಸ್ಥಾನದ ವೈದ್ಯ ಶಕೀಲ್ ಅಫ್ರಿದಿ ಜೈಲಿನಲ್ಲೇ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
2011ರಲ್ಲಿ ಒಸಾಮಾ ಅಡಗಿದ್ದ ಪ್ರಾಂತ್ಯದಲ್ಲಿ ಲಸಿಕೆ ನೀಡುವ ಅನಧಿಕೃತ ಕಾರ್ಯಕ್ರಮ ಹಮ್ಮಿಕೊಂಡಿದ್ದ ಅಫ್ರಿದಿ, ಆ ಪ್ರಾಂತ್ಯದಲ್ಲೇ ಒಸಾಮಾ ಅಡಗಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಅದನ್ನು ಅಮೆರಿಕದ ಭದ್ರತಾ ಪಡೆಗಳಿಗೆ ರವಾನಿಸಿದ್ದರು. ಆ ‘ತಪ್ಪಿಗಾಗಿ’ ಅವರನ್ನೀಗ ಜೈಲಿನಲ್ಲಿ ಇಡಲಾಗಿದೆ.
ಉಗ್ರನೊಬ್ಬನನ್ನು ಮಟ್ಟ ಹಾಕಲು ಪ್ರತಿಯಾಗಿ, ತಮಗೆ ಜೈಲು ಶಿಕ್ಷೆ ನೀಡಲಾಗುತ್ತಿದೆ ಎಂದು ಆಪಾದಿಸಿರುವ ಅವರು, ಆ ಶಿಕ್ಷೆಯ ವಿರುದ್ಧ ಉಪವಾಸ ಸತ್ಯಾಗ್ರಹ ಹೂಡಿದ್ದಾರೆ ಎಂದು ಹೇಳಲಾಗಿದೆ.
Comments are closed.