
ಬೀಜಿಂಗ್ (ಫೆ. 7): ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿರುವ ಕೊರೊನಾ ವೈರಸ್ಗೆ ನಿತ್ಯ ನೂರಕ್ಕೂ ಹೆಚ್ಚು ಜನರು ಮೃತಪಡುತ್ತಿದ್ದಾರೆ. ಸಾವಿನ ಸಂಖ್ಯೆ ಸದ್ಯ 1,500 ಜನರು ಮೃತಪಟ್ಟಿದ್ದಾರೆ. ಈ ಮಧ್ಯೆ ಚೀನಾ ಸರ್ಕಾರ ಹೊಸ ಕಾನೂನನ್ನು ಜಾರಿಗೆ ತಂದಿದ್ದು, ಇದನ್ನು ಪಾಲನೆ ಮಾಡದಿದ್ದರೆ ಜೈಲಿಗೆ ಅಟ್ಟುವುದಾಗಿ ಸರ್ಕಾರ ಹೇಳಿದೆ.
ಚೀನಾದ ವುಹಾನ್ ಹಾಗೂ ಹುಬೈ ಭಾಗದಲ್ಲಿ ಕೊರೊನಾ ಪ್ರಭಾವ ಹೆಚ್ಚಿದೆ. ನಿತ್ಯ ಸಾವಿನ ಸಂಖ್ಯೆ ಏರುತ್ತಿರುವುದು ಈ ಭಾಗದಲ್ಲಿಯೇ. ಹೀಗಾಗಿ ಈ ಪ್ರಾಂತ್ಯಗಳಿಂದ ಹೊರ ಬರುವುದು ಹಾಗೂ ಒಳ ಹೋಗುವುದನ್ನು ನಿಷೇಧಿಸಲಾಗಿದೆ. ಈ ಮಧ್ಯೆ ಚೀನಾ ಶುಕ್ರವಾರದಿಂದ ಹೊಸ ನಿಯಮ ಜಾರಿಗೆ ತಂದಿದೆ.
ಚೀನಾದ ರಾಜಧಾನಿ ಬೀಜಿಂಗ್ನಲ್ಲಿ ಭಾರೀ ಜನಸಂಖ್ಯೆ ಇದೆ. ಒಂದೊಮ್ಮೆ ಈ ಭಾಗದಲ್ಲಿ ಕೊರೊನಾ ವೈರಸ್ ಹಬ್ಬಿದರೆ ಎನ್ನುವ ಆತಂಕ ಸರ್ಕಾರವನ್ನು ಕಾಡಿದೆ. ಹೀಗಾಗಿ, ಹೊರ ಭಾಗದಿಂದ ಈ ನಗರ ಪ್ರವೇಶಿಸುವವರು 14 ದಿನ ಕಡ್ಡಾಯವಾಗಿ ಒಂಟಿಯಾಗಿರಬೇಕು ಎಂದು ಸರ್ಕಾರ ಆದೇಶಿಸಿದೆ. ಒಂದೊಮ್ಮೆ ನಿಯಮ ಮೀರಿದರೆ ಬಂಧಿಸುವುದಾಗಿ ಸರ್ಕಾರ ಹೇಳಿದೆ.
ಶುಕ್ರವಾರ 3,000 ಹೊಸ ಪ್ರಕರಣ ದಾಖಲಾಗಿದ್ದು, ಇದುವರೆಗೆ ಚೀನಾದಲ್ಲಿ ಒಟ್ಟು 66 ಸಾವಿರ ಜನರಿಗೆ ಕೊರೊನಾ ಸೋಂಕು ತಗುಲಿದೆ. ದಿನೇ ದಿನೇ ಸಾವಿನ ಸಂಖ್ಯೆ ಏರಿಕೆ ಆಗುತ್ತಿರುವುದು ಆತಂಕ ಮೂಡಿಸಿದೆ. ಈ ಬಗ್ಗೆ ಚೀನಾ ಸರ್ಕಾರ ಅಗತ್ಯ ಕ್ರಮಕೈಗೊಳ್ಳುತ್ತಿದೆಯಾದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಹೊಸ ನಿಯಮ ಜಾರಿಗೆ ತಂದಿದೆ ಎನ್ನಲಾಗಿದೆ.
ಇದನ್ನೂ ಓದಿ: ಚೀನಾದಲ್ಲಿ ಕೊರೊನಾ ದಾಳಿ; 564ಕ್ಕೆ ಏರಿದ ಸಾವಿನ ಸಂಖ್ಯೆ, 24 ಗಂಟೆಯಲ್ಲಿ 70ಕ್ಕೂ ಹೆಚ್ಚು ಬಲಿ
2002-2003ರಲ್ಲಿ ಸಾರ್ಸ್ ಹೆಸರಿನ ವೈರಸ್ 650 ಜನರನ್ನು ಬಲಿ ತೆಗೆದುಕೊಂಡಿತ್ತು. ಅದೇ ರೀತಿಯ ಗುಣಲಕ್ಷಣಗಳನ್ನು ಹೊಂದಿರುವ ಕೊರೊನಾ ವೈರಸ್ ದಾಳಿಗೆ ಚೀನಾದ ಜನರು ತತ್ತರಿಸಿದ್ದಾರೆ. ಚೀನಾದಿಂದ 20 ಇತರೆ ದೇಶಗಳಿಗೂ ಈ ಮಾರಣಾಂತಿಕ ವೈರಸ್ ಹರಡಿದೆ. ಈ ಹಿನ್ನೆಲೆಯಲ್ಲಿ ಭಾರತದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಚೀನಾದಿಂದ ಬರುವ ಪ್ರಯಾಣಿಕರು ಮತ್ತು ಚೀನಾಗೆ ತೆರಳುವ ಪ್ರಯಾಣಿಕರ ಮೇಲೂ ನಿರ್ಬಂಧ ವಿಧಿಸಲಾಗಿದೆ.
Comments are closed.