ಅಂತರಾಷ್ಟ್ರೀಯ

ಕೊರೊನಾ ವೈರಸ್; ಚೀನಾದಲ್ಲಿ ಸಾವಿರಾರು ವಿವಾಹ ಕಾರ್ಯಕ್ರಮಗಳು ರದ್ದು!

Pinterest LinkedIn Tumblr


ಬೀಜಿಂಗ್: ಮಾರಣಾಂತಿಕ ಕೊರೊನಾ ವೈರಸ್ ಭೀತಿಯಿಂದಾಗಿ ಚೀನಾದಲ್ಲಿ ಸಾವಿರಾರು ಜೋಡಿಗಳು ಮದುವೆಯನ್ನು ಮುಂದೂಡಿದ್ದು, ಇದರಿಂದ ಚೀನಾದ ಮದುವೆ ಇಂಡಸ್ಟ್ರಿಯ ಆದಾಯ ಗಣನೀಯ ಇಳಿಕೆಯಾಗಿರುವುದಾಗಿ ವರದಿ ತಿಳಿಸಿದೆ.

ಗ್ಲೋಬಲ್ ಟೈಮ್ಸ್ ವರದಿ ಪ್ರಕಾರ, ಇಂಡಸ್ಟ್ರಿ ವಿಶ್ಲೇಷಕರು ಮತ್ತು ಉದ್ಯಮದ ಮೂಲಗಳ ಪ್ರಕಾರ ವಿದೇಶಿ ಮದುವೆ ಕಂಪನಿಗಳು ಚೀನಾ ಜೋಡಿಯ ವಿವಾಹವನ್ನು ಇಂಡೋನೇಷ್ಯಾದ ಬಾಲಿ, ಜಪಾನ್ ನ ಒಕಿನಾವಾ ಮತ್ತು ಮಾಲ್ಡೀವ್ಸ್ ನಲ್ಲಿ ನಡೆಸುತ್ತವೆ. ಆದರೆ ಕೊರೊನಾ ವೈರಸ್ ನಿಂದಾಗಿ ಎಲ್ಲಾ ಮದುವೆ ಕಾರ್ಯಕ್ರಮಗಳು ರದ್ದಾಗಿದೆ ಎಂದು ತಿಳಿಸಿದೆ.

ಬೀಜಿಂಗ್ ನ ವೈವಾಹಿಕ ಕಾರ್ಯ ಯೋಜನೆ ಸಂಸ್ಥೆಯ ಉದ್ಯೋಗಿ ಲೀಸಾ ವಾಂಗ್ ಅವರು, ನನ್ನ ಗ್ರಾಹಕ ಫೆಬ್ರವರಿಯಲ್ಲಿ ಬಾಲಿಯಲ್ಲಿ ವಿವಾಹವಾಗಲು ದಿನಾಂಕ ನಿಗದಿ ಮಾಡಿದ್ದರು. ಇದೀಗ ಕೊರೊನಾ ವೈರಸ್ ಭಯದಿಂದ ಜೋಡಿ ವಿವಾಹವನ್ನು ಮುಂದೂಡಿದ್ದಾರೆ ಎಂದು ತಿಳಿಸಿದ್ದಾರೆ.

ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಕಳೆದ ವಾರ ಇಂಡೋನೇಷ್ಯಾ ಚೀನಾದಿಂದ ಆಗಮಿಸುವ ವಿಮಾನಗಳಿಗೆ ನಿಷೇಧ ಹೇರಿತ್ತು. ಜನವರಿ ನಂತರ ವಿವಾಹ ಕಾರ್ಯಕ್ರಮದ ಮೇಲೆ ಭಾರೀ ಪರಿಣಾಮ ಬೀರಿದೆ. ಯಾವುದೇ ನೂತನ ವಧು, ವರರು ತಮ್ಮ ಸಂಸ್ಥೆಯನ್ನು ಸಂಪರ್ಕಿಸಿಲ್ಲ. ಹೀಗಾಗಿ ಬಾಲಿ, ಒಕಿನಾವಾ, ದಕ್ಷಿಣ ಕೋರಿಯಾದಲ್ಲಿ ನಡೆಯಬೇಕಾಗಿದ್ದ ಮದುವೆ ಕಾರ್ಯಕ್ರಮಗಳು ರದ್ದಾಗಿವೆ ಎಂದು ವಾಂಗ್ ಪ್ರತಿಕ್ರಿಯೆ ನೀಡಿದ್ದಾರೆ.

Comments are closed.